ಕರ್ನಾಟಕ

karnataka

ETV Bharat / state

ಬೈಕ್ ಸಮೇತ ಯುವಕ ನಾಪತ್ತೆ: ಪ್ರಕರಣ ದಾಖಲು - ಬೈಕ್ ಸಮೇತ ಯುವಕ ನಾಪತ್ತೆ

ಟೀ ಕುಡಿಯಲು ಬಂದವನಿಂದ ಟೀ ಅಂಗಡಿ ಮುಂದೆ‌ ನಿಲ್ಲಿಸಿದ್ದ ಬೈಕ್ ಕಳುವಾಗಿರುವ ಘಟನೆ ಕೊಳ್ಳೇಗಾಲದಲ್ಲಿ ನಡೆದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

Kollegala
ಬೈಕ್ ಸಮೇತ ಯುವಕ ನಾಪತ್ತೆ: ಪ್ರಕರಣ ದಾಖಲು

By

Published : Jul 8, 2020, 8:30 AM IST

ಕೊಳ್ಳೇಗಾಲ: ಟೀ ಕುಡಿಯಲು ಬಂದವನಿಂದಲ್ಲೇ ಟೀ ಅಂಗಡಿ ಮುಂದೆ‌ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.

ಈ ಸಂಬಂಧ ಬೈಕ್ ಮಾಲೀಕ ದೂರು ದಾಖಲಿಸಿದ್ದಾರೆ. ತಾಲೂಕಿನ ಪಾಳ್ಯ ಗ್ರಾಮದ ಕುಮಾರ್ ತನ್ನ ಹೋಂಡಾ ಡಿಯೋ ಬೈಕ್ ಕಳೆದುಕೊಂಡ ವ್ಯಕ್ತಿ. ಮುಳ್ಳೂರು ಗ್ರಾಮದ ವಿನೋದ್ ಎಂಬುವವನ ಬೈಕ್ ಕಳವು ಮಾಡಿ ಪರಾರಿಯಾಗಿರುವ ಆರೋಪಿ.

ದೂರು ಪ್ರತಿ
ದೂರು ಪ್ರತಿ
ಘಟನೆಯ ವಿವಿರ:ಜೂ.28 ರಂದು ಪಟ್ಟಣದಲ್ಲಿ ವ್ಯಾಪಾರಕ್ಕೆ ಆಗಮಿಸಿದ ಕುಮಾರ್, ಕೃಷ್ಣ ಟಾಕೀಸ್ ರಸ್ತೆಯಲ್ಲಿರುವ ತಾನು ಕೆಲಸ ಮಾಡುವ ವಿಷ್ಣು ಫ್ರೂಟ್ಸ್ ಸ್ಟಾಲ್ ಹಾಗೂ ಕಾಫಿ, ಟೀ ಅಂಗಡಿಯ ಮುಂದೆ ತನ್ನ ಬೈಕ್ ನಿಲ್ಲಿಸಿ ಕೀ ಯನ್ನು ಅಂಗಡಿ ಮಾಲೀಕ ಸಿದ್ದರಾಜುವಿಗೆ ನೀಡಿ ಹೋಗಿದ್ದನು. ಇದನ್ನ ಟೀ ಕುಡಿಯಲು ಬಂದಿದ್ದ ವಿನೋದ್ ಗಮನಸಿದ್ದಾನೆ. ನಂತರ ಮಾಲೀಕ ಅಂಗಡಿಗೆ ಸಿಗರೇಟ್ ತರುವವರೆಗೂ ಅಂಗಡಿ ನೋಡಿಕೊಳ್ಳಿ ಎಂದು ವಿನೋದ್​ಗೆ ಹೇಳಿ ಹೊರಗೆ ಹೋಗಿದ್ದಾರೆ. ವಾಪಸ್​ ಬರುವಷ್ಟರಲ್ಲಿ ಬೈಕ್ ಕೀ ಎಗರಿಸಿ ಡಿಯೋ ಬೈಕ್ ಸಮೇತ ಆರೋಪಿ ನಾಪತ್ತೆಯಾಗಿದ್ದಾನೆ.
ದೂರು ಪ್ರತಿ
ದೂರು ಪ್ರತಿ

ಕೃಷ್ಣ ಬೈಕ್ ಕಳುವಿನ ವಿಚಾರವನ್ನು ಮಾಲೀಕನಿಗೆ ಹೇಳಿದ ತಕ್ಷಣ ಆರೋಪಿ ವಿನೋದ್ ಪತ್ತೆಗೆ ಅವನ ಗ್ರಾಮಕ್ಕೆ ತೆರಳಿದ್ದಾನೆ. ಆದರೆ, ಎಷ್ಟು ಹುಡುಕಿದರೂ ಪತ್ತೆಯಾಗದ‌ ಕಾರಣ ತಡವಾಗಿ ಕುಮಾರ್‌ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ಪತ್ತೆಗೆ ಮುಂದಾಗಿದ್ದಾರೆ.

ABOUT THE AUTHOR

...view details