ಚಾಮರಾಜನಗರ: ಡಿವೈಡರ್ ತಪ್ಪಿಸಲು ಹೋಗಿ ಬೈಕೊಂದು ಮತ್ತೊಂದು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟಿರುವ ಘಟನೆ ನಗರದ ಸೋಮವಾರ ಪೇಟೆ ಬಳಿ ನಡೆದಿದೆ.
ಡಿವೈಡರ್ ತಪ್ಪಿಸಲು ಹೋಗಿ ಮತ್ತೊಂದು ಬೈಕ್ಗೆ ಡಿಕ್ಕಿ: ಓರ್ವ ಸಾವು - Accident at Somavarpete near Chamarajanagar
ಡಿವೈಡರ್ ತಪ್ಪಿಸಲು ಹೋಗಿ ಬೈಕೊಂದು ಇನ್ನೊಂದು ಬೈಕ್ಗೆ ಡಿಕ್ಕಿಯಾದ ಘಟನೆ ಚಾಮರಾಜನಗರದ ಸೋಮವಾರ ಪೇಟೆಯಲ್ಲಿ ನಡೆದಿದೆ.
ಚಾಮರಾಜನಗರದಲ್ಲಿ ಬೈಕ್ ಅಪಘಾತ
ಹರದನಹಳ್ಳಿಯ ಮೋಹನ್ ರಾಜ್ (32) ಮೃತ ಬೈಕ್ ಸವಾರ. ಸಂತೋಷ್ ಎಂಬಾತನ ಬೈಕ್ನಲ್ಲಿ ಚಾಮರಾಜನಗರಕ್ಕೆ ಬರುತ್ತಿದ್ದ ವೇಳೆ ರಸ್ತೆ ವಿಭಜಕಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಎದುರಿನ ಬೈಕ್ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ರಸ್ತೆಗೆಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದ ಮೋಹನ್ ರಾಜ್ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಇನ್ನಿಬ್ಬರು ಸವಾರರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಕುರಿತು ಚಾಮರಾಜನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.