ಚಾಮರಾಜನಗರ: ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಪಾದಯಾತ್ರೆ ರಾಜ್ಯದಲ್ಲಿ ಎರಡನೇ ಕಾಲಿಟ್ಟಿದೆ. ಸುಮಾರು 7.40ಕ್ಕೆ ಜಿಲ್ಲೆಯ ತೊಂಡವಾಡಿ ಗೇಟಿನಿಂದ ಪಾದಯಾತ್ರೆ ಆರಂಭಗೊಂಡಿದ್ದು, ರಾಹುಲ್ ಗಾಂಧಿ, ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಎಂಬಿ ಪಾಟೀಲ್ ಸೇರಿದಂತೆ ಹಲವು ಕಾರ್ಯಕರ್ತರು ಹೆಜ್ಜೆ ಹಾಕುತ್ತಿದ್ದಾರೆ.
ಭಾರತ್ ಜೋಡೋ ಯಾತ್ರೆಯ ಮೊದಲ ದಿನವಾದ ಶುಕ್ರವಾರ ಗುಂಡ್ಲುಪೇಟೆ ತಾಲೂಕಿನ ಬೇಗೂರಿನಲ್ಲಿ ಕ್ಯಾಂಟರ್ ಹೌಸ್ನಲ್ಲಿ ರಾಹುಲ್ ಗಾಂಧಿ ತಂಗಿದ್ದರು. ಇಂದು ತೊಂಡವಾಡಿ ಗೇಟ್ನಿಂದ ನಡಿಗೆ ಆರಂಭಿಸಿದ ಕಾಂಗ್ರೆಸ್ ನಾಯಕರು ಕೆಲವೇ ತಾಸಿನಲ್ಲಿ ಚಾಮರಾಜನಗರದಿಂದ ಮೈಸೂರು ಜಿಲ್ಲೆಗೆ ಯಾತ್ರೆ ಆಗಮಿಸಲಿದೆ.