ಚಾಮರಾಜನಗರ: 'ಸಿದ್ದಯ್ಯ ಸ್ವಾಮಿ ಬನ್ನಿ, ಕಂಡಾಯದ ಒಡೆಯ..' ಎಂಬ ನೀಲಗಾರರ ಕಂಠಕ್ಕೆ ಜೊತೆಯಾಗಿ ಭಜನೆ ಮಾಡುತ್ತಾ ಇಲ್ಲಿನ ಸಿಡಿಎಸ್ ಭವನದಲ್ಲಿ ನಗರಸಭೆ ಸಿಬ್ಬಂದಿ ನಿರಾಶ್ರಿತರನ್ನು ರಂಜಿಸಿದರು.
ಹಾಡು ಹಾಡುತ್ತಾ ನಿರಾಶ್ರಿತರ ಮನರಂಜಿಸಿದ ನಗರಸಭೆ ಸಿಬ್ಬಂದಿ - ಸೋಂಕಿತರ ಮನರಂಜನೆಗಾಗಿ ರಸಮಂಜರಿ
ಗುಂಡ್ಲುಪೇಟೆ ತಾಲೂಕಿನ ವೀರನಪುರ ಕೋವಿಡ್ ಕೇರ್ ಸೆಂಟರ್ನಲ್ಲಿರುವ ಕೋವಿಡ್ ಸೋಂಕಿತರ ಮನರಂಜನೆಗಾಗಿ ತಾಲೂಕು ಆಡಳಿತ ರಸಮಂಜರಿ ಕಾರ್ಯಕ್ರಮ ಆಯೋಜಿಸಿತ್ತು. ಈ ವೇಳೆ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ(ಇಒ) ಶ್ರೀಕಂಠರಾಜೇ ಅರಸ್ ಅವರೂ ಕೂಡಾ ಹಾಡು ಹಾಡಿ ರಂಜಿಸಿದರು.

ನಿರಾಶ್ರಿತ ಕೇಂದ್ರದಲ್ಲಿ ಭಜನಾ ಕಾರ್ಯಕ್ರಮ
ನಿರಾಶ್ರಿತ ಕೇಂದ್ರದಲ್ಲಿ ಭಜನಾ ಕಾರ್ಯಕ್ರಮ
ಲಾಕ್‌ಡೌನ್ ವೇಳೆ ವಸತಿ, ಊಟ ಇಲ್ಲದೇ ಅಲೆದಾಡುತ್ತಿದ್ದ 15 ಮಂದಿಗೆ ಅಗತ್ಯ ಸೌಲಭ್ಯ ಕಲ್ಪಿಸಿ ಇಲ್ಲಿನ ಸಿಡಿಎಸ್ ಭವನದಲ್ಲಿ ಯೋಗಕ್ಷೇಮ ನೋಡಿಕೊಳ್ಳಲಾಗುತ್ತಿದೆ. ಈ ನಿರಾಶ್ರಿತರಿಗೆ ಮನರಂಜನೆ ನೀಡುವ ಸಲುವಾಗಿ ನೀಲಗಾರರ ಪದಗಳ ಮೂಲಕ ಎರಡೂವರೆ ತಾಸು ಕಲಾವಿದರ ಜೊತೆಗೂಡಿ ನಗರಸಭೆ ಸಿಬ್ಬಂದಿ ಭಜನೆ ಮಾಡಿದರು. ಆರಂಭದಲ್ಲಿ ಕಲಾವಿದರು ಭಜನೆ ಮಾಡಿದ್ದು ಬಳಿಕ ಸಂಗೀತ ಸಲಕರಣೆ ಹಿಡಿದು ಹಾಡಿದರು. ಈ ವೇಳೆ ನಿರಾಶ್ರಿತರು ಚಪ್ಪಾಳೆ ಸೇರಿಸುತ್ತಾ ನೀಲಗಾರರ ಪದಕ್ಕೆ ತಲೆದೂಗಿದರು.