ಕರ್ನಾಟಕ

karnataka

ETV Bharat / state

ಬೆಂಗಳೂರಿನ ಮಹಿಳೆ ಕೊಳ್ಳೇಗಾಲದಲ್ಲಿ ಶವವಾಗಿ ಪತ್ತೆ: ಜಜ್ಜಿದ ಮೊಬೈಲ್ ಮೂಲಕ ಗುರುತು ಪತ್ತೆ - ಕೊಳ್ಳೇಗಾಲದಲ್ಲಿ ಮಹಿಳೆ ಶವ ಪತ್ತೆ

ಬೆಂಗಳೂರು ಮೂಲದ ಮಹಿಳೆಯ ಶವ ಅನುಮಾನಸ್ಪದ ರೀತಿಯಲ್ಲಿ ಪತ್ತೆಯಾಗಿದ್ದು, ಕೊಲೆಯ ಶಂಕೆ ವ್ಯಕ್ತವಾಗಿರುವ ಘಟನೆ ಕೊಳ್ಳೆಗಾಲದಲ್ಲಿ ನಡೆದಿದೆ.

ಬೆಂಗಳೂರಿನ ಮಹಿಳೆ ಕೊಳ್ಳೇಗಾಲದಲ್ಲಿ ಶವವಾಗಿ ಪತ್ತೆ
ಬೆಂಗಳೂರಿನ ಮಹಿಳೆ ಕೊಳ್ಳೇಗಾಲದಲ್ಲಿ ಶವವಾಗಿ ಪತ್ತೆ

By

Published : Feb 6, 2023, 8:35 PM IST

ಚಾಮರಾಜನಗರ: ಬೆಂಗಳೂರು ಮೂಲದ ಮಹಿಳೆಯೊಬ್ಬಳು ಕೊಳ್ಳೇಗಾಲ ತಾಲೂಕಿನ ಇಕ್ಕಡಹಳ್ಳಿ ಗ್ರಾಮದ ಸಮೀಪ ಶವವಾಗಿ ಪತ್ತೆಯಾಗಿದ್ದಾರೆ. ಬೆಂಗಳೂರಿನ ಹುಳಿಮಾವು ನಿವಾಸಿ ಶ್ವೇತಾ(35) ಮೃತ ದುರ್ದೈವಿ. ಇಕ್ಕಡಹಳ್ಳಿ ಗ್ರಾಮದ ಜಮೀನಿನ ರಸ್ತೆಯ ಗೊಬ್ಬಳಿ ಬಳಿ ಅನುಮಾನಾಸ್ಪದ ಸ್ಥಿತಿಯಲ್ಲಿ ಶ್ವೇತಾ ಅವರ ಶವಪತ್ತೆಯಾಗಿದ್ದು, ಮೇಲ್ನೋಟಕ್ಕೆ ಕೊಲೆ ಶಂಕೆ ವ್ಯಕ್ತವಾಗಿದೆ. ಮೃತಯುವತಿ ಕೊರಳಿನಲ್ಲಿ ಚಿನ್ನದ ಮಾಂಗಲ್ಯಸರ, ಎರಡು ಕಾಲಿನಲ್ಲಿ ಕಾಲುಂಗುರ, ಜಜ್ಜಿರುವ ಸ್ಥಿತಿಯಲ್ಲಿರುವ ಒಂದು ಮೊಬೈಲ್ ಪತ್ತೆಯಾಗಿವೆ.

ಮೊಬೈಲ್​ನಲ್ಲಿದ್ದ ಸಿಮ್ ಕಾರ್ಡ್ ಮೂಲಕ ಶ್ವೇತಾಳ ಗುರುತನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಶ್ವೇತಾ ವಿವಾಹಿತ ಮಹಿಳೆಯಾಗಿದ್ದು ಒಂದು ಮಗುವಿದ್ದ ಇವರು ಪತಿಯಿಂದ ದೂರವಾಗಿದ್ದರು ಎನ್ನಲಾಗಿದೆ. ಇನ್ನು ಪರಿಚಯಸ್ಥನ ಮೇಲೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದು, ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ. ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಆಸ್ಪತ್ರೆ ಬಳಿ ನಿಲ್ಲಿಸಿದ್ದ ಬೈಕ್ ಕಳವು:ಬೆಳಗ್ಗೆ ನಿಲ್ಲಿಸಿದ್ದ ಬೈಕ್ ಸಂಜೆ ಹೊತ್ತಿಗೆ ಕಳುವಾಗಿರುವ ಘಟನೆ ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿಯ ಸಮುದಾಯ ಆರೋಗ್ಯ ಕೇಂದ್ರದ ಬಳಿ ನಡೆದಿದೆ. ಚಾಮರಾಜು ಎಂಬವರು ಬೈಕ್​ನ್ನು ಕಳ್ಳತನ ಮಾಡಲಾಗಿದೆ.‌ ಸಂತೇಮರಹಳ್ಳಿ ಸಮುದಾಯ ಆರೋಗ್ಯ ಕೇಂದ್ರದ ಬಳಿ ಬೈಕ್ ನಿಲ್ಲಿಸಿ ಮೈಸೂರಿಗೆ ಬಸ್​​​ನಲ್ಲಿ ತೆರಳಿ ವಾಪಾಸ್ ಬಂದು ನೋಡುವಷ್ಟರಲ್ಲಿ ಚಾಮರಾಜರ ಬೈಕ್ ಕಳವಾಗಿದೆ. ಸಂತೇಮರಹಳ್ಳಿ ಠಾಣೆಯಲ್ಲಿ ಈ‌ ಸಂಬಂಧ ಪ್ರಕರಣ ದಾಖಲಾಗಿದೆ.

ಜಮೀನಿಗೆ ನುಗ್ಗಿದ ಕಾಡಾನೆಗಳು

ನಿಲ್ಲದ ಕಾಡಾನೆ ಹಾವಳಿ:ಚಾಮರಾಜನಗರ ತಾಲೂಕಿನ ವಡ್ಗಲ್ ಪುರ, ಹೊನ್ನಳ್ಳಿ ಸೇರಿದಂತೆ ಚಾಮರಾಜನಗರದ ಗಡಿಭಾಗದಲ್ಲಿ 12 ಕ್ಕೂ ಹೆಚ್ಚು ಆನೆಗಳ‌ ಹಿಂಡು ಲಗ್ಗೆ ಇಟ್ಟು ಜಮೀನುಗಳಲ್ಲಿ ಓಡಾಡುತ್ತಿರುವ ಹಿನ್ನೆಲೆ ರೈತರು ಆತಂಕಕ್ಕೊಳಗಾಗಿದ್ದಾರೆ. ಕಳೆದ ಒಂದೂವರೆ ತಿಂಗಳಿನಿಂದ ಈ ಗ್ರಾಮಗಳಲ್ಲಿ ಆನೆ ಹಾವಳಿ ಮಿತಿ ಮೀರಿದ್ದು ಇಂದು ಮಧ್ಯಾಹ್ನದ ಹೊತ್ತಲ್ಲೇ ಜಮೀನುಗಳಲ್ಲಿ ಆನೆಗಳು ಕಾಣಿಸಿಕೊಂಡು ರೈತರ ಆತಂಕ ಹೆಚ್ಚು ಮಾಡಿವೆ. ಗ್ರಾಮಸ್ಥರು ಆನೆ ಓಡಾಡದ ದೃಶ್ಯಗಳನ್ನು ಸೆರೆ ಹಿಡಿದಿದ್ದು ಗಜಪಡೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ.

ನಗರಸಭೆ ಪೌರಾಯುಕ್ತರ ವಿರುದ್ಧ ಎಸ್​ಡಿಪಿಐ ಕಿಡಿ:ರಾಜಕೀಯ ಒತ್ತಡಕ್ಕೆ ಚಾಮರಾಜನಗರ ನಗರಸಭೆ ಪೌರಾಯುಕ್ತರು ಒಳಗಾಗಿದ್ದಾರೆ ಎಂದು ಎಸ್​ಡಿಪಿಐ ಜಿಲ್ಲಾಧ್ಯಕ್ಷ ಅಬ್ರಾರ್ ಅಹಮ್ಮದ್ ಆಕ್ರೋಶ ಹೊರಹಾಕಿದ್ದಾರೆ. ನಗರದ ಬಿ.ರಾಚಯ್ಯ ಜೋಡಿರಸ್ತೆಯಲ್ಲಿ ಅನಧಿಕೃತವಾಗಿ ಫ್ಲೆಕ್ಸ್​ಗಳನ್ನು ಅಳವಡಿಸಿರುವುದನ್ನು ಖಂಡಿಸಿ ಅಬ್ರಾರ್​ ಆಕ್ರೋಶ ಹೊರಹಾಕಿದ್ದಾರೆ. ಈಗಾಗಲೇ ನಗರಸಭೆ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಆಗಿದೆ. ಜೋಡಿ ರಸ್ತೆಯಲ್ಲಿರುವ ಡಿವೈಡರ್ ಮೇಲೆ ಯಾರು ಫ್ಲೇಕ್ಸ್​ಗಳನ್ನು ಹಾಕಬಾರದು ಇದು ನಿಷೇಧಿತ ಸ್ಥಳ ಎಂದು ಘೋಷಿಸಲಾಗಿದೆ. ಅಲ್ಲದೇ ಜಿಲ್ಲಾ ಕಾನೂನು ಪ್ರಾಧಿಕಾರ ಸಹ ಈ ನಿರ್ದಿಷ್ಟ ಸ್ಥಳದಲ್ಲಿ ಫ್ಲೇಕ್ಸ್ ಹಾಕದಿರುವಂತೆ ನಗರಸಭೆ ಪೌರಾಯುಕ್ತರಿಗೆ ಲಿಖಿತ ಪತ್ರ ನೀಡಿ ಕ್ರಮ ಜರುಗಿಸುವಂತೆ ಸೂಚನೆ ನೀಡಿದ್ದಾರೆ. ಹೀಗಿದ್ದರೂ ಸಹ ಎಲ್ಲ ನೀತಿ ನಿಯಮಗಳನ್ನು ಗಾಳಿಗೆ ತೋರಿ ಅನಧಿಕೃತ ಫ್ಲೇಕ್ಸ್ ಗಳನ್ನು ಹಾಕಲಾಗಿದೆ. ರಾಜಕೀಯ ಒತ್ತಡಕ್ಕೆ ಮಣಿದಿರುವ ಪೌರಾಯುಕ್ತರ ನಡೆ ಅತ್ಯಂತ ಖಂಡನೀಯ ಎಂದಿದ್ದಾರೆ.

ಇದನ್ನೂ ಓದಿ:ಆರ್ಥಿಕ ಸಂಕಷ್ಟ.. ತಂಗಿ ಮದುವೆ ದಿನವೇ ಭದ್ರಾವತಿಯಲ್ಲಿ ಕಾರ್ಮಿಕ ಆತ್ಮಹತ್ಯೆ

ABOUT THE AUTHOR

...view details