ಗುಂಡ್ಲುಪೇಟೆ: ತಾಲೂಕಿನಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೇಗೂರು ಗ್ರಾಮದಲ್ಲಿ ಜುಲೈ 17ರಿಂದ 19ರವರೆಗೆ 3 ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಮಾಡುವುದಕ್ಕೆ ಗ್ರಾಮದ ಮುಖ್ಯಸ್ಥರು ಮತ್ತು ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಜಂಟಿಯಾಗಿ ತೀರ್ಮಾನಿಸಿದ್ದಾರೆ.
ಕೊರೊನಾ ಭೀತಿ : 3 ದಿನ ಬೇಗೂರು ಗ್ರಾಮ ಸ್ವಯಂ ಲಾಕ್ಡೌನ್ - ಚಾಮರಾಜನಗರ ಜಿಲ್ಲಾ ಸುದ್ದಿ
ಕೋವಿಡ್ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗುಂಡ್ಲುಪೇಟೆ ತಾಲೂಕಿನ ಬೇಗೂರು ಗ್ರಾಮವನ್ನು ಮೂರು ದಿನ ಸಂಪೂರ್ಣ ಲಾಕ್ಡೌನ್ ಮಾಡಲು ಗ್ರಾಮಸ್ಥರು ಮತ್ತು ವಿವಿಧ ಸಂಘ ಸಂಸ್ಥೆಗಳ ಸದಸ್ಯರು ನಿರ್ಧಾರ ಕೈಗೊಂಡಿದ್ದಾರೆ.
![ಕೊರೊನಾ ಭೀತಿ : 3 ದಿನ ಬೇಗೂರು ಗ್ರಾಮ ಸ್ವಯಂ ಲಾಕ್ಡೌನ್ beguru-village-lock-down](https://etvbharatimages.akamaized.net/etvbharat/prod-images/768-512-8053393-thumbnail-3x2-dd.jpg)
ಬೇಗೂರು ಗ್ರಾಮ
3 ದಿನ ಬೇಗೂರು ಗ್ರಾಮ ಸ್ವಯಂ ಲಾಕ್ಡೌನ್
ಆಟೋ, ಟ್ಯಾಕ್ಸಿ ಮತ್ತು ಹಣ್ಣಿನ ವ್ಯಾಪಾರಿಗಳು, ವರ್ತಕರು, ಬಾರ್, ಮದ್ಯದ ಅಂಗಡಿ, ಹೋಟೆಲ್, ರಸ್ತೆ ಬದಿ ವ್ಯಾಪಾರಿಗಳು, ಮಾಂಸಾಹಾರಿ ಅಂಗಡಿಗಳು ಸ್ವಯಂ ಪ್ರೇರಿತವಾಗಿ ಲಾಕ್ ಡೌನ್ ಮಾಡುವ ಮೂಲಕ ಸಹಕರಿಸುವಂತೆ ಮನವಿ ಮಾಡಿದ್ದಾರೆ.
ಮೂರು ದಿನಗಳವರೆಗೆ ಸಂಪೂರ್ಣ ಎಲ್ಲಾ ಚಟುವಟಿಕೆಗಳನ್ನು ಬಂದ್ ಮಾಡಿ, ದೂರದ ಊರುಗಳಿಗೆ ಹೋಗಬೇಡಿ, ಹೊರಗಿನವರು ಸಹ ಗ್ರಾಮಗಳಿಗೆ ಬರದಂತೆ ಎಚ್ಚರ ವಹಿಸಿ, ಆರೋಗ್ಯದಲ್ಲಿ ಏರುಪೇರಾದರೆ ವೈದ್ಯರ ಸಲಹೆ ಪಡೆದುಕೊಳ್ಳಿ, ಜಿಲ್ಲಾಡಳಿತ ಸೂಚಿಸಿರುವ ನಿಯಮ ಪಾಲಿಸಿ ಎಂದು ಮನವಿ ಗ್ರಾಮಸ್ಥರಿಗೆ ಸೂಚಿಸಲಾಗಿದೆ.