ಕರ್ನಾಟಕ

karnataka

ETV Bharat / state

ಸುಳ್ವಾಡಿ ಮಾರಮ್ಮನ ಬಾಗಿಲು ತೆರೆಯುವ ಮುನ್ನ ಹೋಮ ಅವಶ್ಯ- ಆಗಮಿಕ ಪಂಡಿತರ ಸಲಹೆ - ಸುಳ್ವಾಡಿ ದುರಂತ

ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುಳ್ವಾಡಿ ಮಾರಮ್ಮನ ದೇವಾಲಯವನ್ನು ತೆರೆಯುವಂತೆ ಭಕ್ತರು ಒತ್ತಾಯಿಸಿದ್ದರು. ದೇವಸ್ಥಾನ ತೆರೆಯುವ ಬಗ್ಗೆ ಅಭಿಪ್ರಾಯ ಕೇಳಿ ಧಾರ್ಮಿಕ ದತ್ತಿ ಇಲಾಖೆಗೆ ಜಿಲ್ಲಾಧಿಕಾರಿಗಳು ಪತ್ರ ಬರೆದಿದ್ದರು. ಅದರಂತೆ, ಪಂಡಿತರು ಭೇಟಿಯಿತ್ತು ದೇವಾಲಯದ ಪೂಜಾ ಕೈಂಕರ್ಯಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದಾರೆ.

sulewadi temple
ಸುಳ್ವಾಡಿ ಮಾರಮ್ಮನ ದೇವಸ್ಥಾನ

By

Published : Jan 8, 2020, 2:38 AM IST

ಚಾಮರಾಜನಗರ: ವಿಷಪ್ರಸಾದ ದುರಂತ ಪ್ರಕರಣದಿಂದ ರಾಜ್ಯದ ಗಮನಸೆಳದಿದ್ದ ಹನೂರು ತಾಲ್ಲೂಕಿನ ಸುಳ್ವಾಡಿ ಗ್ರಾಮದ ಕಿಚ್ಚುಗುತ್ತಿ ಮಾರಮ್ಮನ ದೇವಾಲಯಕ್ಕೆ ಧಾರ್ಮಿಕ ದತ್ತಿ ಇಲಾಖೆಯ ರಾಜ್ಯ ಆಗಮಿಕ ಪಂಡಿತ ವಿದ್ವಾನ್ ಜಿ.ಎ. ವಿಜಯ್‍ಕುಮಾರ್ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದ್ದು, ಬಾಗಿಲು ತೆರೆಯವ ಮುನ್ನ ಹೋಮ ಅವಶ್ಯ ಎಂದಿದ್ದಾರೆ.

ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ದೇವಾಲಯವನ್ನು ತೆರೆಯುವಂತೆ ಭಕ್ತರು ಒತ್ತಾಯಿಸಿದ್ದರು. ದೇವಸ್ಥಾನ ತೆರೆಯುವ ಬಗ್ಗೆ ಅಭಿಪ್ರಾಯ ಕೇಳಿ ಧಾರ್ಮಿಕ ದತ್ತಿ ಇಲಾಖೆಗೆ ಜಿಲ್ಲಾಧಿಕಾರಿಗಳು ಪತ್ರ ಬರೆದಿದ್ದರು. ಅದರಂತೆ, ಪಂಡಿತರು ಭೇಟಿಯಿತ್ತು ದೇವಾಲಯದ ಪೂಜಾ ಕೈಂಕರ್ಯಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದಾರೆ.

ದೇವಾಯಲದಲ್ಲಿ ದುರಂತ ಸಂಭವಿಸಿ ಒಂದು ವರ್ಷವಾಗಿದೆ. ಅಂದಿನಿಂದ ದೇವಾಲಯದಲ್ಲಿ ಪೂಜಾ ಕೈಂಕರ್ಯಗಳು ನಡೆದಿಲ್ಲ. ಆದ್ದರಿಂದ ಧಾರ್ಮಿಕ ವಿಧಿವಿಧಾನಗಳ ಮೂಲಕ ಹೋಮ ಹವನ ನಡೆಸಬೇಕಾಗುತ್ತದೆ ಎಂದಿದ್ದಾರೆ.

ಇನ್ನು, ಆಗಮಿಕ ಪಂಡಿತರ ಭೇಟಿ ಬಳಿಕ ದೇಗುಲ ತೆರೆಯವ ಕಾರ್ಯ ಶೀಘ್ರ ನೆರವೇರಲಿದೆ ಎನ್ನಲಾಗುತ್ತಿದೆ.

ABOUT THE AUTHOR

...view details