ಕರ್ನಾಟಕ

karnataka

ETV Bharat / state

ಗೂಡು ಹೊಕ್ಕು ಗೀಜಗನ ಮರಿ ಹಿಡಿದ ಹಾವು: ಕುತೂಹಲಕಾರಿ ವಿಡಿಯೋ - food chain

ಗೀಜಗನ ಗೂಡನ್ನು ಹೊಕ್ಕ ಹಾವೊಂದು ಗೀಜಗನ ಮರಿಯನ್ನು ಹೊತ್ತೊಯ್ಯುವ ಅಪರೂಪದ ದೃಶ್ಯ ವನ್ಯಜೀವಿ ಛಾಯಾಗ್ರಾಹಕ ವೇಣುಗೋಪಾಲ್​ ಸೆರೆ ಹಿಡಿದಿದ್ದಾರೆ.

snake attack
ಹಾವಿನ ದಾಳಿ

By

Published : Jun 29, 2020, 11:52 AM IST

ಚಾಮರಾಜನಗರ:ಮರದ ರೆಂಬೆಯ ತುದಿಯಲ್ಲಿದ್ದ ಗೀಜಗನ ಗೂಡಿಗೆ ಕೆರೆಹಾವು ನುಸುಳಿ ಗೀಜಗನ ಮರಿಯನ್ನು ಹಿಡಿದ ವಿಡಿಯೋವೊಂದನ್ನು ವನ್ಯಜೀವಿ ಛಾಯಾಗ್ರಾಹಕ ವೇಣುಗೋಪಾಲ್ ಈಟಿವಿ ಭಾರತಕ್ಕೆ ನೀಡಿದ್ದಾರೆ.

ಹಾವಿನ ದಾಳಿ

ಮೈಸೂರು ಹೊರವಲಯದಲ್ಲಿ ತೆರಳುತ್ತಿದ್ದ ವೇಳೆ ಅಂಜನಾ ಸುಜಯಕಾಂತ್ ಎಂಬುವರು ಗೀಜಗನ ಬೇಟೆಗೆ ಹಾವು ಹೊಂಚುಹಾಕಿದ್ದನ್ನು ಕಂಡು ವೇಣುಗೋಪಾಲ್​ಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಚಕಚಕನೇ ತಯಾರಾಗಿ ಅಪರೂಪದ ಬೇಟೆಯನ್ನು ಸೆರೆಹಿಡಿದು ಈಟಿವಿ ಭಾರತಕ್ಕೆ ವಿಡಿಯೋ ನೀಡಿದ್ದಾರೆ.‌

ರೆಂಬೆಯೊಂದರ ತುದಿಯಲ್ಲಿದ್ದ 3 ಗೀಜಗನ ಗೂಡುಗಳ ಪೈಕಿ, ಒಂದಕ್ಕೆ ಕೆರೆ ಹಾವು ಲಗ್ಗೆ ಇಟ್ಟು ಪ್ರಯಾಸದಿಂದ ಗೂಡಿಗೆ ನುಸುಳಿ ಮರಿಯನ್ನು ಹೊತ್ತೊಯ್ಯುತ್ತದೆ. ಹಾವು ಕಂಡ ಕೂಡಲೇ ಪಕ್ಷಿಗಳು ಮರಿಯನ್ನು ರಕ್ಷಿಸಲಾಗದೇ ಚೀರಾಡುತ್ತವೆ. ನೋಡುಗರಿಗೆ ಬೇಸರವಾದರೂ ಅದನ್ನು ತಿಂದೇ ಬದುಕಬೇಕಾದ್ದು ಹಾವಿಗೆ ಅನಿವಾರ್ಯ, ಅದೇ ಪ್ರಕೃತಿಯ ಸಹಜತೆಯೂ ಕೂಡ.

ABOUT THE AUTHOR

...view details