ಕರ್ನಾಟಕ

karnataka

ETV Bharat / state

ಚಾಮರಾಜನಗರದಲ್ಲಿ ಬಸವನಾಡು ಯೋಜನೆಗೆ ಚಿಂತನೆ: ವಾಟಾಳ್​ ನಾಗರಾಜ್​ - ಕನ್ನಡ ಚಳವಳಿಗಾರ ವಾಟಾಳ್ ನಾಗಾರಾಜ್

ಮೈಸೂರು-ಚಾಮರಾಜನಗರ ಒಳಗೊಂಡಂತೆ ಬಸವನಾಡು ಎಂಬ ಯೋಜನೆ ರೂಪಿಸುತ್ತಿದ್ದು, ಈಗಲೇ ಅದರ ಆಳ-ಅಗಲ ತಿಳಿಸಲು ಸಾಧ್ಯವಿಲ್ಲ. ಸರ್ಕಾರ ಹಾಗೂ ಖಾಸಗಿಯವರ ಸಹಾಯದ ಮೂಲಕ ಮಾಡೇ ತೀರುತ್ತೇನೆ ಎಂದು ವಾಟಾಳ್ ನಾಗಾರಾಜ್ ತಿಳಿಸಿದರು.

vatal nagaraj
ಚಾಮರಾಜನಗರದಲ್ಲಿ ಬಸವನಾಡು ನಿರ್ಮಾಣದ ಚಿಂತನೆ: ವಾಟಾಳ್ ಘೋಷಣೆ

By

Published : Apr 26, 2020, 4:02 PM IST

Updated : Apr 26, 2020, 5:36 PM IST

ಚಾಮರಾಜನಗರ: ಬೀದರ್​ನಲ್ಲಿ ಬಸವಕಲ್ಯಾಣದಂತೆ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಬಸವನಾಡು ಎಂಬ ಅದ್ಭುತ ಕಲ್ಪನೆಯ ಯೋಜನೆ ನನ್ನ ಬಳಿಯಿದೆ. ಶೀಘ್ರವೇ ರೂಪುರೇಷೆ ಘೋಷಿಸುತ್ತೇನೆ ಎಂದು ಕನ್ನಡ ಚಳವಳಿಗಾರ ವಾಟಾಳ್ ನಾಗಾರಾಜ್ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದ ಅವರು, ಮೈಸೂರು-ಚಾಮರಾಜನಗರ ಒಳಗೊಂಡಂತೆ ಬಸವನಾಡು ಎಂಬ ಯೋಜನೆ ರೂಪಿಸುತ್ತಿದ್ದು, ಈಗಲೇ ಅದರ ಆಳ-ಅಗಲ ತಿಳಿಸಲು ಸಾಧ್ಯವಿಲ್ಲ. ಸರ್ಕಾರ ಹಾಗೂ ಖಾಸಗಿಯವರ ಸಹಾಯದ ಮೂಲಕ ಮಾಡೇ ತೀರುತ್ತೇನೆ ಎಂದರು.

ಚಾಮರಾಜನಗರದಲ್ಲಿ ಬಸವನಾಡು ಯೋಜನೆಗೆ ಚಿಂತನೆ: ವಾಟಾಳ್​ ನಾಗರಾಜ್​

ಇನ್ನು, ಕೊರೊನಾ ಯೋಧರಾಗಿ ಪೊಲೀಸರು ದುಡಿಯುತ್ತಿದ್ದಾರೆ. ಆದ್ದರಿಂದ ಈಗಲಾದರೂ ಔರಾದ್ಕರ್ ವರದಿಯನ್ನು ಜಾರಿಗೊಳಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ವಾರದಿಂದ ವಿಧಾನಸೌಧದ ಮುಂಭಾಗ ಹಗಳು-ರಾತ್ರಿ ಸತ್ಯಾಗ್ರಹ ನಡೆಸುತ್ತೇನೆ ಎಂದು ಎಚ್ಚರಿಸಿದರು.

ಇದಕ್ಕೂ ಮುನ್ನ ಕೊರೊನಾ ಮುಕ್ತ ಚಾಮರಾಜನಗರ ಆಗಿರುವುದಕ್ಕೆ ಚಾಮರಾಜೇಶ್ವರನಿಗೆ ಕರ್ಪೂರ ಹೊತ್ತಿಸಿ, ಈಡುಗಾಯಿ ಒಡೆದು ಚಾಮರಾಜನಗರ ಹಾಗೂ ರಾಜ್ಯ ಶೀಘ್ರ ಕೊರೊನಾ ಭೀತಿಯಿಂದ ಹೊರ ಬರಲೆಂದು ಪ್ರಾರ್ಥಿಸಿದರು.

Last Updated : Apr 26, 2020, 5:36 PM IST

ABOUT THE AUTHOR

...view details