ಚಾಮರಾಜನಗರ: ಕೆಎಸ್ಆರ್ಟಿಸಿ ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಇಲ್ಲಿನ ಚೆನ್ನಲಿಂಗನಹಳ್ಳಿ ಗ್ರಾಮದ ಸಮೀಪ ಸಂಭವಿಸಿದೆ.
ಹನೂರು ತಾಲೂಕಿನ ಅಣಗಳ್ಳಿ ದೊಡ್ಡಿ ಗ್ರಾಮದ ಪ್ರಕಾಶ್ (26) ಮೃತಪಟ್ಟ ಯುವಕ. ಖಾಸಗಿ ಬ್ಯಾಂಕ್ನ ಕೇಂದ್ರೀಯ ಸಂಘದಲ್ಲಿ ಕೆಲಸ ಮಾಡುತ್ತಿದ್ದ ಪ್ರಕಾಶ್ ಸೋಮವಾರ ಮಂಗಲ, ಚೆನ್ನಲಿಂಗನಹಳ್ಳಿ ಗ್ರಾಮದಲ್ಲಿನ ಕೇಂದ್ರೀಯ ಸಂಘದ ಸದಸ್ಯರಿಂದ ಹಣ ಪಡೆದಿದ್ದಾನೆ. ಅಲ್ಲಿಂದ ಪ್ರಕಾಶ್ ಲೋಕನಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದಾಗ ಒಡೆಯರಪಾಳ್ಯ ಗ್ರಾಮದಿಂದ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಯಂತ್ರಣ ತಪ್ಪಿ ಬೈಕ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಪ್ರಕಾಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.