ಚಾಮರಾಜನಗರ:ತನ್ನ ಎರಡು ಮರಿಗಳನ್ನು ಕೂಗಿ ಅರಸುತ್ತಾ ಹುಲಿಯೊಂದು ಗಾಂಭೀರ್ಯದಿಂದ ನಡೆದುಬಂದು ಸಫಾರಿಗರನ್ನು ರೋಮಾಂಚನಗೊಳಿಸಿರುವ ಘಟನೆ ಬಂಡೀಪುರದಲ್ಲಿ ಎರಡು ದಿನಗಳ ಹಿಂದೆ ನಡೆದಿದೆ. ಇದರ ವಿಡಿಯೋ ವೈರಲ್ ಆಗಿದೆ.
Watch..ಸಫಾರಿಗರ ಮುಂದೆ ಮರಿಗಳನ್ನು ಹುಡುಕಿದ ಹುಲಿ: ಬಂಡೀಪುರದ ವಿಡಿಯೋ ವೈರಲ್ - ಚಾಮರಾಜನಗರ ಬಂಡೀಪುರ
ಬಸವನಕಟ್ಟೆ ಎಂಬಲ್ಲಿ ಪ್ರವಾಸಿಗರಿಗೆ ಆಗಾಗ್ಗೆ ಕಾಣಸಿಗುತ್ತಿರುವ "ಸುಂದರಿ"(ಕೆಲ ಛಾಯಾಗ್ರಾಹಕರು ಇಟ್ಟಿರುವ ಹೆಸರು) ಎಂಬ ಹುಲಿಯು ಘರ್ಜಿಸುತ್ತಾ ಮರಿಗಳನ್ನು ಕೂಗಿ ಕರೆಯುತ್ತಿರುವ ವಿಡಿಯೋವನ್ನು ಮಂಗಳವಾರ ಬೆಳಗ್ಗಿನ ಸಫಾರಿಯಲ್ಲಿ ಪ್ರವಾಸಿಗರು ಸೆರೆ ಹಿಡಿದಿದ್ದಾರೆ. 10 ನಿಮಿಷಗಳಿಗೂ ಹೆಚ್ಚು ಸಮಯ ಹುಲಿ ದರ್ಶನ ನೀಡಿದೆ ಎಂದು ತಿಳಿದು ಬಂದಿದೆ.
ಬಸವನಕಟ್ಟೆ ಎಂಬಲ್ಲಿ ಪ್ರವಾಸಿಗರಿಗೆ ಆಗಾಗ್ಗೆ ಕಾಣಸಿಗುತ್ತಿರುವ "ಸುಂದರಿ"(ಕೆಲ ಛಾಯಾಗ್ರಾಹಕರು ಇಟ್ಟಿರುವ ಹೆಸರು) ಎಂಬ ಹುಲಿಯು ಘರ್ಜಿಸುತ್ತಾ ಮರಿಗಳನ್ನು ಕೂಗಿ ಕರೆಯುತ್ತಿರುವ ವಿಡಿಯೋವನ್ನು ಮಂಗಳವಾರ ಬೆಳಗಿನ ಸಫಾರಿಯಲ್ಲಿ ಪ್ರವಾಸಿಗರು ಸೆರೆ ಹಿಡಿದಿದ್ದಾರೆ. 10 ನಿಮಿಷಗಳಿಗೂ ಹೆಚ್ಚು ಸಮಯ ಹುಲಿ ದರ್ಶನ ನೀಡಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಹೆಸರು ಹೇಳಲಿಚ್ಚಿಸದ ಚಾಲಕರು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದು, ಸುಂದರಿಗೆ ಎರಡು ಮರಿಗಳಿದ್ದು ಅವುಗಳನ್ನು ಕೂಗಿ ಕರೆಯುತ್ತಿತ್ತು. 10-15 ನಿಮಿಷಗಳ ಬಳಿಕ ತಾಯಿಯನ್ನು ಅವು ಸೇರಿಕೊಂಡವು. ಪ್ರವಾಸಿಗರು ವ್ಯಾಘ್ರನನ್ನು ಕಂಡು ಬಲು ರೋಮಾಂಚನಗೊಂಡರು ಎಂದು ತಿಳಿಸಿದ್ದಾರೆ.