ಚಾಮರಾಜನಗರ : ಬಂಡೀಪುರ ವಸತಿಗೃಹದಲ್ಲಿ ನೂತನ ವರ್ಷಾರಂಭವನ್ನು ಆಚರಿಸಬೇಕೆನ್ನುವ ಪ್ರವಾಸಿಗರಿಗೆ ನಿರಾಶೆ ಕಾದಿದೆ. ಅನೈತಿಕ ಚಟುವಟಿಕೆ ನಡೆದ ಹಿನ್ನೆಲೆ ಡಿ. 30, 31 ಹಾಗೂ ಜನವರಿ 1ರ ರಾತ್ರಿ ಪ್ರವಾಸಿಗರಿಗೆ ವಸತಿ ಗೃಹಗಳನ್ನು ನೀಡದಿರಲು ಅರಣ್ಯ ಇಲಾಖೆ ನಿರ್ಧರಿಸಿದೆ.
ಹೊಸವರ್ಷಕ್ಕೆ ಸಿಗಲ್ಲ ಬಂಡೀಪುರ ವಸತಿಗೃಹ : ಖಾಸಗಿ ರೆಸಾರ್ಟ್ಗಳೂ ಪಾಲಿಸಬೇಕಿದೆ ಹಲವು ನಿಯಮ - ಬಂಡೀಪುರ ಖಾಸಗಿ ರೆಸಾರ್ಟ್
ಡಿ.31ರಂದು ವಸತಿಗೃಹಗಳನ್ನು ಪ್ರವಾಸಿಗರಿಗೆ ನೀಡದೇ ಬಂಡೀಪುರ ವಾಸ್ತವ್ಯವನ್ನು ನಿರ್ಬಂಧಿಸಿಕೊಂಡು ಬರಲಾಗುತ್ತಿದೆ. ಈ ವರ್ಷ ಅದು ಮೂರು ದಿನಕ್ಕೆ ವಿಸ್ತರಿಸಲಾಗಿದೆ. 30, 31 ಹಾಗೂ ಜನವರಿ 1ರ ರಾತ್ರಿ ಪ್ರವಾಸಿಗರಿಗೆ ವಸತಿ ಗೃಹಗಳನ್ನು ನೀಡದಿರಲು ಅರಣ್ಯ ಇಲಾಖೆ ನಿರ್ಧರಿಸಿದೆ..

ಕಳೆದ ಎರಡ್ಮೂರು ವರ್ಷಗಳಿಂದ ಡಿ.31ರಂದು ವಸತಿಗೃಹಗಳನ್ನು ಪ್ರವಾಸಿಗರಿಗೆ ನೀಡದೇ ವಾಸ್ತವ್ಯವನ್ನು ನಿರ್ಬಂಧಿಸಿಕೊಂಡು ಬರಲಾಗುತ್ತಿದೆ. ಈ ವರ್ಷ ಅದು ಮೂರು ದಿನಕ್ಕೆ ವಿಸ್ತರಿಸಲಾಗಿದೆ. ಬಂಡೀಪುರದಲ್ಲಿ 19 ವಸತಿಗೃಹಗಳಿವೆ. ವೀಕೆಂಡ್ ಮತ್ತು ವಿಶೇಷ ದಿನಗಳಲ್ಲಿ ಭಾರೀ ಬೇಡಿಕೆ ಇರುತ್ತದೆ.
ಖಾಸಗಿ ರೆಸಾರ್ಟ್ಗಳಿಗೆ ಹಲವು ನಿರ್ಬಂಧ : ಹೊಸ ವರ್ಷಾಚರಣೆಗೆ ಇನ್ನೂ ಒಂದು ವಾರವಿದೆ ಎನ್ನುವಾಗಲೇ ಗುಂಡ್ಲುಪೇಟೆ, ಬಂಡೀಪುರ ಸುತ್ತಮುತ್ತಲಿನ ಹೋಟೆಲ್ಗಳು, ರೆಸಾರ್ಟ್ಗಳು ಬುಕ್ಕಿಂಗ್ ಆಗಿ ತುಂಬಿ ತುಳುಕುತ್ತಿವೆ. ಹೊಸ ವರ್ಷಾರಂಭದ ಮೂಡ್‌ನಲ್ಲಿರುವ ಪ್ರವಾಸಿಗರಿಗೆ ಮನರಂಜನೆ ನೀಡುವ ಭರದಲ್ಲಿ ವನ್ಯಪ್ರಾಣಿಗಳಿಗೆ ತೊಂದರೆಯಾಗದಿರಲೆಂದು ಅರಣ್ಯ ಇಲಾಖೆಯು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಆಜುಬಾಜಿನಲ್ಲಿರುವ 12 ರೆಸಾರ್ಟ್ಗಳಿಗೆ ಹಲವು ನಿಯಮಗಳನ್ನು ವಿಧಿಸಿದೆ.
- ನಿಯಮಗಳು
- ಧ್ವನಿವರ್ಧಕ ಬಳಸುವುದು ಮತ್ತು ಸಂಗೀತ ಕಾರ್ಯಕ್ರಮ ನಡೆಸುವಂತಿಲ್ಲ
- ಪ್ಲಢ್ ಲೈಟ್ ಮತ್ತು ಫೋಕಸ್ ಲೈಟ್ ಬಳಸುವಂತಿಲ್ಲ
- ಫೈರ್ ಕ್ಯಾಂಪ್ ಹಾಕುವಂತಿಲ್ಲ
- ವನ್ಯಜೀವಿಗಳಿಗೆ ಯಾವುದೇ ಧಕ್ಕೆ ಆಗದಂತೆ, ಒತ್ತಡ ಬೀಳದಂತೆ ನಡೆದುಕೊಳ್ಳಬೇಕು