ಚಾಮರಾಜನಗರ :ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಂಪುರ ಆನೆ ಶಿಬಿರದ ಚೈತ್ರಾ ಮತ್ತು ಲಕ್ಷ್ಮಿ ಆನೆಗಳು ಆಯ್ಕೆಯಾಗಿವೆ.
ಈ ಕುರಿತು ಸಿಎಫ್ಒ ನಟೇಶ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಪ್ರಾಥಮಿಕ ಹಂತದಲ್ಲಿ ಆಯ್ಕೆಯಾಗಿದ್ದ ಮೂರು ಆನೆಗಳಲ್ಲಿ ಚೈತ್ರಾ ಮತ್ತು ಲಕ್ಷ್ಮಿ ಆಯ್ಕೆಯಾಗಿವೆ. ಇದೇ ಸೆ.11ಕ್ಕೆ ಮದ್ದೂರು ವಲಯದಿಂದ ಗಜಪಯಣ ಆರಂಭವಾಗಲಿದೆ ಎಂದು ತಿಳಿಸಿದರು.