ಚಾಮರಾಜನಗರ:ಭಾರತ್ ಬಂದ್ನಿಂದ ಕೆಲವರು ತೊಂದರೆಗೆ ಸಿಲುಕಿದ್ದಾರೆ. ವಿವಿಧ ಸಂಘಟನೆಗಳು ಹೆದ್ದಾರಿ ತಡೆದು ಬಸ್ ಸಂಚರಿಸಿದಂತೆ ಪ್ರತಿಭಟಿಸುತ್ತಿದ್ದ ವೇಳೆ, ಬಸ್ಗಾಗಿ ಕಾಯುತ್ತಿದ್ದ ರೋಗಿವೋರ್ವ ಕುಸಿದುಬಿದ್ದ ಘಟನೆ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಈ ರೋಗಿಯನ್ನು ನೋಡಿದ ಕೂಡಲೇ ಪಟ್ಟಣ ಠಾಣೆ ಪಿಐ ಮಹೇಶ್ ತಮ್ಮ ಜೀಪಿನಲ್ಲೇ ಜಿಲ್ಲಾಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಕುಸಿದುಬಿದ್ದ ವ್ಯಕ್ತಿ ಚಾಮರಾಜನಗರ ತಾಲೂಕಿನ ಜ್ಯೋತಿಗೌಡನಪುರ ಗ್ರಾಮದವರಾಗಿದ್ದು, ಜಯದೇವ ಆಸ್ಪತ್ರೆಗೆ ತೆರಳಬೇಕಿತ್ತು ಎಂದು ತಿಳಿದುಬಂದಿದೆ.