ಚಾಮರಾಜನಗರ: ನೂತನ ಕೃಷಿ ಮಸೂದೆ ವಾಪಸ್ ಪಡೆಯಲು ಆಗ್ರಹಿಸಿ ಕರೆ ನೀಡಿದ್ದ ಬಂದ್ನಿಂದಾಗಿ ಕೆಎಸ್ಆರ್ಟಿಸಿ ಚಾಮರಾಜನಗರ ಉಪವಿಭಾಗಕ್ಕೆ ಬರೋಬ್ಬರಿ 19-20 ಲಕ್ಷ ರೂ. ನಷ್ಟವಾಗಿದೆ.
ಈ ಕುರಿತು ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ 'ಈಟಿವಿ ಭಾರತ'ದೊಂದಿಗೆ ಮಾತನಾಡಿ, ಗುಂಡ್ಲುಪೇಟೆ, ಕೊಳ್ಳೇಗಾಲದಲ್ಲಿ ಬಸ್ ಸಂಚಾರ ಸಾಮಾನ್ಯವಾಗಿತ್ತು. ಆದರೆ ಚಾಮರಾಜನಗರದಿಂದ ಬೇರೆಡೆಗೆ ತೆರಳುವ 150ಕ್ಕೂ ಹೆಚ್ಚು ಬಸ್ಗಳು ತೆರಳದೇ ಇರುವುದರಿಂದ 19-20 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಇನ್ನು ಬಸ್ ಸಿಗದೇ ಬೆಳಗ್ಗೆಯಿಂದ ಪರಿತಪಿಸಿದ ಕೆಲವರು ರೈಲುಗಳನ್ನು ಹಿಡಿದು ಮೈಸೂರು, ಮಂಡ್ಯ, ಬೆಂಗಳೂರಿಗೆ ತೆರಳಿದರು. ಸೋಮವಾರದಿಂದ ಆರಂಭವಾದ ತಿರುಪತಿ-ಚಾಮರಾಜನಗರ ಎಕ್ಸ್‌ಪ್ರೆಸ್ ರೈಲು ಮೊದಲ ದಿನ ಖಾಲಿ ಹೊರಟಿದ್ದು, ಎರಡನೇ ದಿನ ಬಂದ್ ಎಫೆಕ್ಟ್ನಿಂದಾಗಿ ರೈಲಿನಲ್ಲಿ ಜನರ ಸಂಚಾರ ಹೆಚ್ಚಾಗಿತ್ತು.