ಗುಂಡ್ಲುಪೇಟೆ (ಚಾಮರಾಜನಗರ) :ನೆರೆಯ ರಾಜ್ಯ ಕೇರಳದ ವಿವಿಧ ಭಾಗದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ತಾಲೂಕಿನ ಗಡಿ ಭಾಗದಲ್ಲಿ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ತಾಲೂಕಿನ ಮೂಲೆಹೊಳೆ ಮತ್ತು ಕೆಕ್ಕನಹಳ್ಳ ಭಾಗದಲ್ಲಿ ಅರಣ್ಯ, ಪೊಲೀಸ್, ಕಂದಾಯ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ಸಂಚಾರ ಮಾಡುವ ಸಿಬ್ಬಂದಿಯ ತಪಾಸಣೆ ನಡೆಸುತ್ತಿದ್ದಾರೆ.
ಪ್ರಯಾಣಿಕರನ್ನು ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಡಿಸುತ್ತಿರುವ ಅಧಿಕಾರಿಗಳು ಕೇರಳ ರಾಜ್ಯದಿಂದ ಬರುವ ಎಲ್ಲಾ ವಾಹನಗಳಲ್ಲಿರುವವರನ್ನು ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಡಿಸಲಾಗುತ್ತಿದೆ. ಬಸ್‌ನಲ್ಲಿದ್ದ ಪ್ರಯಾಣಿಕರೂ ಥರ್ಮಲ್ ಸ್ಕ್ರೀನಿಂಗ್‌ಗೆ ಒಳಗಾಗುತ್ತಿದ್ದಾರೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ರವಿಕುಮಾರ್ ತಿಳಿಸಿದರು.
ಓದಿ:ಗಾಂಧೀಜಿ ಭಾವಚಿತ್ರ ಬಿಡಿಸಿ ವಿಶ್ವ ದಾಖಲೆ : ರೆಕಾರ್ಡ್ಗಳ ಸರದಾರ ವಿಜಯಪುರದ ಪೋರ
ಕೇರಳದಿಂದ ಬರುವ ಕಾರು, ಬಸ್, ಟೆಂಪೋ, ಲಾರಿ, ಟಿಪ್ಪರ್ ಹಾಗೂ ಬೈಕ್‌ನಲ್ಲಿ ಬರುವ ಜನರಿಗೆ ಮೊದಲಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತದೆ. ಜ್ವರ ಕಂಡು ಬಂದಲ್ಲಿ ಕಗ್ಗಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪರೀಕ್ಷೆ ಮಾಡಲು ಎಲ್ಲಾ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.