ಕರ್ನಾಟಕ

karnataka

ETV Bharat / state

ಕೆಸರಿನಲ್ಲಿ ಸಿಲುಕಿ ಮರಿಯಾನೆ ಒದ್ದಾಟ: ಜೆಸಿಬಿ‌ ಸಹಾಯದಿಂದ ರಕ್ಷಣೆ - ಹಾಸನದಲ್ಲಿ ಮರಿಯಾನೆ ಒದ್ದಾಟ

ಕಾಡಾನೆ ಮರಿಯೊಂದು ಕೆಸರಿನಲ್ಲಿ ಸಿಲುಕಿ ಮೇಲೆಳಲೂ ಆಗದೆ, ಹೊರ ಬರಲೂ ಆಗದೆ ಒದ್ದಾಡುತ್ತಿದ್ದನ್ನು ಕಂಡ ಅರಣ್ಯ ಇಲಾಖೆ ಸಿಬ್ಬಂದಿ, ಮೇಲಾಧಿಕಾರಿಗಳ ಗಮನಕ್ಕೆ ತಂದು ಜೆಸಿಬಿ ಸಹಾಯದಿಂದ ರಕ್ಷಣೆ ಮಾಡಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

baby-elephant-protect-by-forest-dept-officials-in-chamarajanagara
ಕೆಸರಿನಲ್ಲಿ ಸಿಲುಕಿ ಮರಿಯಾನೆ ಒದ್ದಾಟ

By

Published : May 16, 2021, 3:05 PM IST

ಚಾಮರಾಜನಗರ: ಕೆಸರಿನಲ್ಲಿ ಸಿಲುಕಿ ನರಳಾಡುತ್ತಿದ್ದ ಕಾಡಾನೆ ಮರಿಯೊಂದನ್ನು ರಕ್ಷಿಸಿರುವ ಘಟನೆ ಇಂದು ಬೆಳಗ್ಗೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ವಿಭಾಗದ ಮೊಳೆಯೂರು ವಲಯದ ಮೀನಕಟ್ಟೆ ಕೆರೆ ಬಳಿ ನಡೆದಿದೆ.

ಕೆಸರಿನಲ್ಲಿ ಸಿಲುಕಿ ಒದ್ದಾಡಿದ ಮರಿಯಾನೆ

ಕಾಡಾನೆ ಮರಿಯೊಂದು ಕೆಸರಿನಲ್ಲಿ ಸಿಲುಕಿ ಮೇಲೆಳಲೂ ಆಗದೆ, ಹೊರ ಬರಲೂ ಆಗದೆ ಒದ್ದಾಡುತ್ತಿದ್ದನ್ನು ಕಂಡ ಅರಣ್ಯ ಇಲಾಖೆ ಸಿಬ್ಬಂದಿ, ಮೇಲಾಧಿಕಾರಿಗಳ ಗಮನಕ್ಕೆ ತಂದು ಜೆಸಿಬಿ ಸಹಾಯದಿಂದ ಕಾಡಾನೆ ಮರಿಯನ್ನು ರಕ್ಷಣೆ ಮಾಡಿದ್ದಾರೆ.

ಸದ್ಯ, ಆನೆ ಮರಿಯ ಆರೋಗ್ಯ ಉತ್ತಮವಾಗಿದೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದ್ದು, ತಾಯಿ ಆನೆ ಬಗ್ಗೆ ನಿಗಾ ಇಡುವ ಕುರಿತು ಯಾವುದೇ ವಿವರ ನೀಡಿಲ್ಲ.

ಓದಿ:ತೌಕ್ತೆ ಎಫೆಕ್ಟ್: ಹಾನಿಗೊಳಗಾದ ಕರಾವಳಿ ಭಾಗದಲ್ಲಿ ಪರಿಹಾರ ಕಾರ್ಯಾಚರಣೆಗೆ ಸಿಎಂ ಸೂಚನೆ

ABOUT THE AUTHOR

...view details