ಚಾಮರಾಜನಗರ:ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಬಂಡೀಪುರ ಕ್ಯಾಂಪಸ್ಸಿನಲ್ಲಿ ಮರಿಯಾನೆಯೊಂದು ಮೃತಪಟ್ಟಿರುವ ಘಟನೆ ನಡೆದಿದೆ.
ಬಂಡೀಪುರ ಕ್ಯಾಂಪಸ್ಸಿನಲ್ಲಿ ಮರಿಯಾನೆ ಸಾವು: ಹೊಟ್ಟೆ ನೋವಿನಿಂದ ಮೃತಪಟ್ಟಿರುವ ಶಂಕೆ - Elephant died news
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ 3ರಿಂದ 4 ವರ್ಷ ವಯಸ್ಸಿನ ಆನೆಮರಿ ಹೊಟ್ಟೆನೋವಿಗೆ ಬಲಿಯಾಗಿದೆ.
ಮೃತಪಟ್ಟ ಮರಿಯಾನೆ ಗಂಡಾಗಿದ್ದು 3-4 ವರ್ಷ ವಯಸ್ಸಾಗಿದೆ ಎಂದು ಅಂದಾಜಿಸಲಾಗಿದೆ. ಮರಿಯಾನೆ ಹೊಟ್ಟೆನೋವಿನಿಂದ ಸಹಜ ಸಾವನ್ನಪ್ಪಿದೆ ಎಂದು ಮೂಲಗಳು ತಿಳಿಸಿವೆ. ಮರಿಯಾನೆ ಮೃತಪಟ್ಟ ವೇಳೆ ತಾಯಿ ಆನೆಯೂ ಜೊತೆಯಲ್ಲಿತ್ತು ಎಂದು ತಿಳಿದುಬಂದಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ರೋಧಿಸುತ್ತಿದ್ದ ತಾಯಿ ಆನೆಯನ್ನು ಪ್ರಯಾಸಪಟ್ಟು ಕಾಡಿಗೆ ಓಡಿಸಿದ್ದಾರೆ.
ಆನೆಯ ಮರಣೋತ್ತರ ಪರೀಕ್ಷೆಯನ್ನು ಡಾ.ನಾಗರಾಜು ನಡೆಸಿದ ಬಳಿಕ ಕಾಡಿನಲ್ಲಿ ಆನೆ ಪಾರ್ಥೀವ ಶರೀರವನ್ನು ಹೂಳಲಾಗಿದೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೆ ಹುಂಡೀಪುರದ ನರಹಂತಕ ಹುಲಿರಾಯ ಮರಿಯಾನೆಯೊಂದನ್ನು ಭೇಟೆಯಾಡಿ ತಿಂದಿದ್ದ.