ಕರ್ನಾಟಕ

karnataka

ETV Bharat / state

ಚಾಮರಾಜನಗರ ದುರಂತ: ಜಿಲ್ಲಾಸ್ಪತ್ರೆಗೆ ನಿವೃತ್ತ ನ್ಯಾ.ಪಾಟೀಲ್ ಭೇಟಿ ಸಂಭವ

ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದ ಆಕ್ಸಿಜನ್ ದುರಂತದ ತನಿಖೆ ಮುಂದುವರಿಸಿದ್ದು, ನ್ಯಾಯಾಂಗ ತನಿಖೆಗೆ ಸರ್ಕಾರ ನೇಮಿಸಿರುವ ನಿವೃತ್ತ ನ್ಯಾಯಮೂರ್ತಿ ಬಿ.ಎ‌‌.ಪಾಟೀಲ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

ಚಾಮರಾಜನಗರ
ಚಾಮರಾಜನಗರ

By

Published : May 31, 2021, 12:53 PM IST

ಚಾಮರಾಜನಗರ: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದ ಆಕ್ಸಿಜನ್ ದುರಂತಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆಗೆ ಸರ್ಕಾರ ನೇಮಿಸಿರುವ ನಿವೃತ್ತ ನ್ಯಾಯಮೂರ್ತಿ ಬಿ.ಎ‌‌.ಪಾಟೀಲ್ ಇಂದು ಅಥವಾ ನಾಳೆ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.

ಹೈಕೋರ್ಟ್ ನೇಮಕ ಮಾಡಿದ ನಿ‌.ನ್ಯಾಯಮೂರ್ತಿಗಳ ತನಿಖಾ ತಂಡ ಈಗಾಗಲೇ ವರದಿಯನ್ನು ಸಲ್ಲಿಸಿದ್ದು ಚಾಮರಾಜನಗರ ಜಿಲ್ಲಾಧಿಕಾರಿ ವೈಫಲ್ಯ, ಆಕ್ಸಿಜನ್ ಕೊರತೆಯಿಂದಲೇ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಈಗ ಸರ್ಕಾರ ನೇಮಿಸಿದ ನಿವೃತ್ತ ನ್ಯಾಯಾಮೂರ್ತಿಗಳಾದ ಬಿ.ಎ.ಪಾಟೀಲ್ ಅವರು ಕೂಡ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಕಡತಗಳ ಪರಿಶೀಲನೆ, ಆಸ್ಪತ್ರೆಯಲ್ಲಿನ ವ್ಯವಸ್ಥೆ, ವೈದ್ಯರ ವಿಚಾರಣೆ ಮಾಡಲಿದ್ದಾರೆ ಎನ್ನಲಾಗಿದೆ.

ಸದ್ಯಕ್ಕೆ ಈಗ ಆ್ಯಕ್ಸಿಜನ್ ದುರಂತಕ್ಕೆ ಸಂಬಂಧಿಸಿದಂತೆ ಮತ್ತೊಂದು ತನಿಖೆ ನಡೆಯಲಿದ್ದು ಸಾಕಷ್ಟು ಕುತೂಹಲ ಕೆರಳಿಸಿದೆ. ಹೈಕೋರ್ಟ್ ತನಿಖಾ ತಂಡ ನೇಮಕ ಮಾಡುವ ಮುನ್ನವೇ ಬಿ.ಎ‌.ಪಾಟೀಲ್ ಅವರನ್ನು ಸರ್ಕಾರ ನೇಮಿಸಿದ್ದಕ್ಕೆ ಈ ಹಿಂದೆ ಛೀಮಾರಿ ಹಾಕಿಸಿಕೊಂಡಿತ್ತು.

ಇದನ್ನೂ ಓದಿ:ಕೊರೊನಾ ತೊಲಗಲೆಂದು ಬೀದಿಗೆ ದಿಗ್ಬಂಧನ : ನಿತ್ಯ ಎರಡು ಮಡಿಕೆಯಲ್ಲಿ ಧೂಪ

ABOUT THE AUTHOR

...view details