ಚಾಮರಾಜನಗರ: ಶಬರಿಮಲೆ ಯಾತ್ರಾರ್ಥಿಗಳು ಮೈಸೂರು ಮಲ್ಲಿಗೆ ಎಂಬ ಕನ್ನಡದ ರೊಮ್ಯಾಂಟಿಕ್ ಹಾಡೊಂದಕ್ಕೆ ಮಾಡಿರುವ ಡ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಹಲವರ ಆಕ್ರೋಶಕ್ಕೆ ಕಾರಣವಾಗಿದೆ.
ಅಯ್ಯಪ್ಪ ಮಾಲಾಧಾರಿಗಳ ಡ್ಯಾನ್ಸ್ ವೈರಲ್: ನೃತ್ಯಕ್ಕೆ ನೆಟ್ಟಿಗರ ಕಿಡಿ - ಚಾಮರಾಜನಗರ ಅಯ್ಯಪ್ಪ ಮಾಲಾಧಾರಿಗಳ ಡ್ಯಾನ್ಸ್ ವೈರಲ್
ಶಬರಿಮಲೆ ಯಾತ್ರಾರ್ಥಿಗಳು ರೊಮ್ಯಾಂಟಿಕ್ ಹಾಡೊಂದಕ್ಕೆ ಮಾಡಿರುವ ಡ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಹಲವರ ಆಕ್ರೋಶಕ್ಕೆ ಕಾರಣವಾಗಿದೆ.
![ಅಯ್ಯಪ್ಪ ಮಾಲಾಧಾರಿಗಳ ಡ್ಯಾನ್ಸ್ ವೈರಲ್: ನೃತ್ಯಕ್ಕೆ ನೆಟ್ಟಿಗರ ಕಿಡಿ chamarajanagara](https://etvbharatimages.akamaized.net/etvbharat/prod-images/768-512-5771657-thumbnail-3x2-vid.jpg)
ಮಾಲಾಧಾರಿಗಳ ಡ್ಯಾನ್ಸ್
ಅಯ್ಯಪ್ಪ ಮಾಲಾಧಾರಿಗಳ ಡ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್
ತಾಮಸಿಕ ಆಹಾರಗಳನ್ನು ತ್ಯಜಿಸಿ ಮಡಿ ಬಟ್ಟೆಯಲ್ಲಿ ಸದಾ ಅಯ್ಯಪ್ಪ ಸ್ವಾಮಿಯ ಧ್ಯಾನ ಮಾಡಿ ವ್ರತಾಚರಣೆ ಮಾಡುವುದು ರೂಢಿ. ಆದರೆ ಕೆಲ ಮಾಲಾಧಾರಿಗಳು ಭಕ್ತಿಯ ಗಾಂಭೀರ್ಯತೆ ಇಲ್ಲದೆ ಕುಣಿದು ಶಬರಿಮಲೆ ಯಾತ್ರೆಯನ್ನು ಪ್ರವಾಸದಂತೆ ಪರಿಗಣಿಸಿರುವುದಕ್ಕೆ ನೆಟ್ಟಿಗರು ಕಿಡಿಕಾರಿದ್ದಾರೆ.
ಸಾತ್ವಿಕ ಆಹಾರ, ಬ್ರಹ್ಮಚರ್ಯೆ, ಗಾಂಭೀರ್ಯ ಕಾಪಾಡಿಕೊಳ್ಳಬೇಕಾದ ಮಾಲಾಧಾರಿಗಳು ಅಯ್ಯಪ್ಪನಿಗೆ ಅಪಚಾರ ಎಸಗಿದ್ದಾರೆ ಎಂದು ಭಕ್ತರು ಕಿಡಿಕಾರಿದ್ದಾರೆ.