ಕರ್ನಾಟಕ

karnataka

ETV Bharat / state

ಗೂಡ್ಸ್ ಆಟೋ ಪಲ್ಟಿ: 11 ಮಹಿಳಾ ಕೂಲಿ ಕಾರ್ಮಿಕರಿಗೆ ಗಾಯ - ಕೊಳ್ಳೇಗಾಲ

ಗೂಡ್ಸ್ ಆಟೋ ಪಲ್ಟಿಯಾಗಿ 11 ಮಂದಿ ಮಹಿಳೆಯರು ಗಾಯಗೊಂಡಿರುವ ಘಟನೆ ಕೊಳ್ಳೇಗಾಲದ ಮತ್ತೀಪುರ ಕ್ರಾಸಿನಲ್ಲಿ ನಡೆದಿದ್ದು, ಗಾಯಾಳುಗಳನ್ನು ಕೊಳ್ಳೇಗಾಲದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗೂಡ್ಸ್ ಆಟೋ ಪಲ್ಟಿ: 11 ಮಹಿಳಾ ಕೂಲಿ ಕಾರ್ಮಿಕರಿಗೆ ಗಾಯ

By

Published : Oct 5, 2019, 12:30 PM IST

ಚಾಮರಾಜನಗರ: ಗೂಡ್ಸ್ ಆಟೋ ಪಲ್ಟಿಯಾಗಿ 11 ಮಂದಿ ಮಹಿಳೆಯರು ಗಾಯಗೊಂಡಿರುವ ಘಟನೆ ಕೊಳ್ಳೇಗಾಲದ ಮತ್ತೀಪುರ ಕ್ರಾಸಿನಲ್ಲಿ ನಡೆದಿದೆ.

ಗಾಯಗೊಂಡವರೆಲ್ಲರೂ ಇಕ್ಕಡಹಳ್ಳಿ ಗ್ರಾಮದವರಾಗಿದ್ದು, ಕೂಲಿ ಕೆಲಸಕ್ಕಾಗಿ ಮೊಳಗನಕಟ್ಟೆ ಗ್ರಾಮಕ್ಕೆ ಗೂಡ್ಸ್ ಆಟೋದಲ್ಲಿ ತೆರಳುತ್ತಿದ್ದರು ಎಂದು ತಿಳಿದುಬಂದಿದೆ. ಅತಿ ವೇಗವೇ ಈ ಅವಘಡಕ್ಕೆ ಕಾರಣ ಎನ್ನಲಾಗಿದ್ದು ಮಹಿಳೆಯರ ಚೀರಾಟ ಕೇಳಿ ಸ್ಥಳೀಯರು ದೌಡಾಯಿಸಿ ಬಂದು ಕೊಳ್ಳೇಗಾಲದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮರಿಯಪುರದ ಪ್ರಕಾಶ್ ಎಂಬಾತ ಚಾಲಕನಾಗಿದ್ದು ಆಟೋ ಬಿಟ್ಟು ಪರಾರಿಯಾಗಿದ್ದಾನೆ. ಕೊಳ್ಳೇಗಾಲ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ABOUT THE AUTHOR

...view details