ಕರ್ನಾಟಕ

karnataka

ETV Bharat / state

ಆಸ್ಪತ್ರೆಗೆ ತೆರಳುವಾಗ ಆಟೋ ಪಲ್ಟಿ: ತುಂಬು ಗರ್ಭಿಣಿ ಸಾವು - chamaraja nagara latest new

ಆರೋಗ್ಯ ತಪಾಸಣೆಗೆ ತೆರಳುವ ವೇಳೆ ತಿರುವಿನಲ್ಲಿ ಆಟೋ ಪಲ್ಟಿಯಾಗಿ ಗರ್ಭಿಣಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

Auto overturn during going to hospital : pregnant woman death
ಆಸ್ಪತ್ರೆಗೆ ತೆರಳುವಾಗ ಆಟೋ ಪಲ್ಟಿ

By

Published : May 2, 2021, 4:02 AM IST

ಚಾಮರಾಜನಗರ: ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ತೆರಳುವಾಗ ಆಟೋ ಪಲ್ಟಿಯಾಗಿ ತುಂಬು ಗರ್ಭಿಣಿಯೊಬ್ಬರು ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಅಣ್ಣೂರು ರಸ್ತೆಯಲ್ಲಿ ನಡೆದಿದೆ.

ತುಂಬು ಗರ್ಭಿಣಿ ಸಾವು

ಗುಂಡ್ಲುಪೇಟೆ ತಾಲೂಕಿನ ಅಣ್ಣೂರು ಗ್ರಾಮದ ಪೂರ್ಣಿಮ(20) ಮೃತ ದುರ್ದೈವಿ. ಪತಿ ಅಖಿಲೇಶ್ ಜೊತೆ ಆಟೋದಲ್ಲಿ ಆರೋಗ್ಯ ತಪಾಸಣೆಗೆ ತೆರಳುವ ವೇಳೆ ತಿರುವಿನಲ್ಲಿ ಆಟೋ ಪಲ್ಟಿಯಾಗಿ ಸ್ಥಳದಲ್ಲೇ ಅಸುನೀಗಿದ್ದಾರೆ.

ಆಕೆ 8 ತಿಂಗಳ ಗರ್ಭೀಣಿಯಾಗಿದ್ದಳು ಎಂದು ತಿಳಿದುಬಂದಿದೆ. ಮರಣೋತ್ತರ ಪರೀಕ್ಷೆ ಬಳಿಕ ಅಂತ್ಯಸಂಸ್ಕಾರ ನೆರವೇರಿದ್ದು ಗುಂಡ್ಲುಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details