ಚಾಮರಾಜನಗರ :ನಾಡಿನ ಪ್ರಮುಖ ದೇಗುಲಗಳಲ್ಲಿ ಒಂದಾದ ಮಲೆಮಹದೇಶ್ವರ ಬೆಟ್ಟದಲ್ಲಿ ಬೀದಿಬದಿ ಅಂಗಡಿಗಳನ್ನು ತೆರವುಗೊಳಿಸುತ್ತಿರುವ ಪ್ರಾಧಿಕಾರದ ನಡೆ ವಿರುದ್ಧ ವ್ಯಾಪಾರಿಗಳ ಜಟಾಪಟಿ ಮುಂದುವರೆದಿದೆ.
ಇಂದು ಪ್ರಾಧಿಕಾರದ ಸಿಬ್ಬಂದಿ ಬೀದಿಬದಿ ಮಳಿಗೆಗಳನ್ನು ತೆರವುಗೊಳಿಸಲು ಮುಂದಾಗಿ ಬಲವಂತದಿಂದ ಆಟಿಕೆ ಸಾಮಾನು, ದಿನಬಳಕೆ ವಸ್ತುಗಳನ್ನು ಕಸಿದು ತೆರವು ಕಾರ್ಯಾಚರಣೆ ನಡೆಸಿರುವುದರ ವಿರುದ್ಧ ವ್ಯಾಪಾರಿಗಳು ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ಓದಿ:ಸ್ಯಾಂಡಲ್‌ವುಡ್ ಡ್ರಗ್ಸ್ ಕೇಸ್ : ಹೈದರಾಬಾದ್ ಮೂಲದ ಇಬ್ಬರು ಉದ್ಯಮಿಗಳಿಗೆ ನೋಟಿಸ್
ಎರಡು ವರ್ಷಗಳ ಹಿಂದೆ ಪ್ರಾಧಿಕಾರವು ನಮ್ಮ ಜೊತೆ ಸಭೆ ನಡೆಸಿ ಬೀದಿಬದಿ ವ್ಯಾಪಾರಕ್ಕೆ ಅವಕಾಶ ಕೊಡಲಾಗಿತ್ತು. ಆದರೆ, ಈಗಿನ ಕಾರ್ಯದರ್ಶಿ ಜಯವಿಭವಸ್ವಾಮಿ ಬೀದಿಬದಿ ವ್ಯಾಪಾರಸ್ಥರನ್ನು ಒಕ್ಕಲೆಬ್ಬಿಸಲು ಮುಂದಾಗಿದ್ದಾರೆ ಎಂದು ಬೀದಿ ವ್ಯಾಪಾರಿ ಸೌಮ್ಯ ಕಾರ್ಯದರ್ಶಿ ವಿರುದ್ಧ ಕಿಡಿಕಾರಿದ್ದಾರೆ.
ಬೀದಿಬದಿ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡದಿದ್ದರೇ ಮುಂದಾಗುವ ಪ್ರಾಣಹಾನಿಗಳಿಗೆ ಜಯವಿಭವಸ್ವಾಮಿ ಅವರೇ ಹೊಣೆಗಾರರು ಎಂದು ವ್ಯಾಪಾರಿಗಳು ಎಚ್ಚರಿಸಿದ್ದಾರೆ.