ಚಾಮರಾಜನಗರ:ಜೂಜು ಅಡ್ಡೆ ಮೇಲೆ ಕೊಳ್ಳೇಗಾಲ ಹಾಗೂ ಹನೂರು ಪೊಲೀಸರು ಜಂಟಿ ದಾಳಿ ನಡೆಸಿ, 13 ಜನರನ್ನು ಬಂಧಿಸಿರುವ ಘಟನೆ ಹನೂರು ತಾಲೂಕಿನ ಕಾಮಗೆರೆ- ಲೊಕ್ಕನಹಳ್ಳಿ ಮಾರ್ಗ ಮಧ್ಯೆ ನಡೆದಿದೆ.
ಜೂಜು ಅಡ್ಡೆ ಮೇಲೆ ದಾಳಿ: 4.17 ಲಕ್ಷ ವಶ, 13 ಜನರ ಬಂಧನ - Case at Hanor Station
ಹನೂರು ತಾಲೂಕಿನ ಕಾಮಗೆರೆ- ಲೊಕ್ಕನಹಳ್ಳಿ ಮಾರ್ಗ ಮಧ್ಯೆ ವೆಂಕಟೇಶ್ ಎಂಬುವರ ತೋಟದ ಮನೆಯಲ್ಲಿ ಜೂಜಾಡುತ್ತಿದ್ದ 13 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಜೂಜು ಅಡ್ಡೆ
ವೆಂಕಟೇಶ್ ಎಂಬುವರ ತೋಟದ ಮನೆಯಲ್ಲಿ ಜೂಜಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ, ಬರೋಬ್ಬರಿ 4,17,320 ರೂ. ವಶಪಡಿಸಿಕೊಂಡು 13 ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತರ ಮಾಹಿತಿ ಕುರಿತು ಪೊಲೀಸರು ಪ್ರತಿಕ್ರಿಯಿಸಿಲ್ಲ. ಹನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.