ಚಾಮರಾಜನಗರ: ಗಾಯಗೊಂಡ ವ್ಯಕ್ತಿಯನ್ನು ನೋಡಲು ಆಸ್ಪತ್ರೆಗೆ ಬಂದಾತನಿಗೆ ಮಚ್ಚಿನಿಂದ ಹಲ್ಲೆ ನಡೆಸಿರುವ ಘಟನೆ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಯಲ್ಲಿ ನಡೆದಿದೆ.
ಗಾಯಾಳು ನೋಡಲು ಆಸ್ಪತ್ರೆಗೆ ಬಂದವನ ಮೇಲೆ ಮಚ್ಚಿನಿಂದ ಹಲ್ಲೆ - chamarajanagar
ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದ ಗಾಯಾಳುಗಳನ್ನು ನೋಡಲು ಬಂದ ದಾಸನಪುರದ ಮಹದೇವ ಎಂಬಾತನಿಗೆ ಗಾಯಾಳು ಸಂಬಂಧಿಕರು ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಹಳೇ ವೈಷಮ್ಯದಿಂದ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಗಾಯಾಳುಗಳನ್ನು ನೋಡಲು ಬಂದ ದಾಸನಪುರದ ಮಹದೇವ ಎಂಬಾತನಿಗೆ ಗಾಯಾಳು ಸಂಬಂಧಿಕರು ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಆಸ್ಪತ್ರೆಯೊಳಗಿನ ಈ ದಾಂಧಲೆ ಕಂಡು ಉಳಿದ ರೋಗಿಗಳು ಮತ್ತವರ ಸಂಬಂಧಿಕರು ಕ್ಷಣಕಾಲ ಆತಂಕಗೊಂಡ ಘಟನೆಯೂ ನಡೆದಿದೆ.
ಮಾಹಿತಿ ಅರಿತು ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆಂದು ಮೂಲಗಳು ತಿಳಿಸಿವೆ. ಸದ್ಯ, ರಜನಿ, ರಾಜೇಶ್, ದೊರೆಸ್ವಾಮಿ, ಬಸವರಾಜು, ಅನಿಲ್ ಸೇರಿದಂತೆ ಏಳು ಮಂದಿ ಆರೋಪಿಗಳನ್ನು ಮಾರಕಾಸ್ತ್ರ ಸಮೇತ ಕೊಳ್ಳೇಗಾಲ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.