ಕರ್ನಾಟಕ

karnataka

ETV Bharat / state

ವೃದ್ಧೆ ಮೇಲೆ ಹಲ್ಲೆ ನಡೆಸಿ, ರಾತ್ರೋರಾತ್ರಿ ಮನೆ ನೆಲಸಮ ಮಾಡಿದ ದುಷ್ಕರ್ಮಿಗಳು - ಕೊಟ್ಯಂತರ ರೂ ಬೆಲೆ ಬಾಳುವ ಮನೆ ನೆಲಸಮ

ನಿನ್ನೆ ರಾತ್ರೋರಾತ್ರಿ ವೃದ್ಧೆಯೊಬ್ಬರು ವಾಸವಿದ್ದ ಮನೆಗೆ ನುಗ್ಗಿದ ದುಷ್ಕರ್ಮಿಗಳು ಆಕೆಯ ಮೇಲೆ ಹಲ್ಲೆ ನಡೆಸಿ, ಇಟಾಚಿಯಿಂದ ಕೊಟ್ಯಂತರ ರೂ. ಬೆಲೆ ಬಾಳುವ ಮನೆಯನ್ನ ನೆಲಸಮ ಮಾಡಿದ್ದಾರೆ..

ರಾತ್ರೋರಾತ್ರಿ ಮನೆ ನೆಲಸಮ
ರಾತ್ರೋರಾತ್ರಿ ಮನೆ ನೆಲಸಮ

By

Published : Mar 30, 2022, 1:02 PM IST

ಕೊಳ್ಳೇಗಾಲ: ನಿನ್ನೆ ತಡರಾತ್ರಿ ವೃದ್ಧೆಯೊಬ್ಬರ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳು ರಾತ್ರೋರಾತ್ರಿ ಇಟಾಚಿ ಮೂಲಕ ಮನೆ ನೆಲಸಮ ಮಾಡಿರುವ ಘಟನೆ ಕೊಳ್ಳೇಗಾಲ ಪಟ್ಟಣದಲ್ಲಿ ನಡೆದಿದೆ. ಕೊಳ್ಳೇಗಾಲ ಪಟ್ಟಣದ ಡಾ.ರಾಜ್ ಕುಮಾರ್ ರಸ್ತೆಯ ಪಕ್ಕದಲ್ಲಿ ವಾಸವಿದ್ದ ವೃದ್ಧೆ ದೇವಮ್ಮನ ಮೇಲೆ ಪುಂಡರು ದೌರ್ಜನ್ಯ ನಡೆಸಿದ್ದಾರೆ.

ಏನಿದು ಘಟನೆ?: ವೃದ್ಧೆ ದೇವಮ್ಮ 60 ವರ್ಷದಿಂದಲೂ ಪಟ್ಟಣದ ಡಾ.ರಾಜ್ ಕುಮಾರ್ ರಸ್ತೆಯ ಮನೆಯೊಂದರಲ್ಲಿ ವಾಸವಿದ್ದಾರೆ. ಆದ್ರೆ, ಕೋಟ್ಯಂತರ ರೂ. ಬೆಲೆ ಬಾಳುವ ಆಸ್ತಿಯನ್ನು ಕೆಲ ದುಷ್ಕರ್ಮಿಗಳು ಕಬಳಿಸಲು ಹೊಂಚು ಹಾಕಿದ್ದಾರೆ. ಈ ಆಸ್ತಿ ವಿವಾದ ಕೋರ್ಟ್‌ನಲ್ಲಿದೆ.

ರಾತ್ರೋರಾತ್ರಿ ವೃದ್ಧೆಯ ಮನೆ ನೆಲಸಮ ಮಾಡಿದ ದುಷ್ಕರ್ಮಿಗಳು

ನಿನ್ನೆ ತಡರಾತ್ರಿ ಏಕಾಏಕಿ ಮನೆಯಲ್ಲಿದ್ದ ದೇವಮ್ಮಳನ್ನು ಹೊರಗೆ ಕರೆದು ಹಲ್ಲೆ ನಡೆಸಿ, ಮನೆ ಖಾಲಿ ಮಾಡುವಂತೆ ಬೆದರಿಕೆ ಹಾಕಿದ್ದಾರೆ. ವೃದ್ಧೆ ಒಪ್ಪದ ಹಿನ್ನೆಲೆ ಆಕೆಯ ಕಣ್ಮುಂದೆಯೇ ಮನೆಯನ್ನು ನೆಲಸಮ ಮಾಡಿದ್ದಾರೆ. ಕೋಟ್ಯಂತರ ರೂ. ಬೆಲೆ ಬಾಳುವ ಆಸ್ತಿಯನ್ನು ಕಬಳಿಸಲು ಸುರೇಶ್ ಬಾಬು ತಂಡ ಸಂಚು ರೂಪಿಸಿ ಆಗಾಗ ತೊಂದರೆ ನೀಡುತ್ತಿದ್ದಾರೆ‌ ಎಂದು ದೇವಮ್ಮ ಗಂಭೀರವಾಗಿ ಆರೋಪಿಸಿದ್ದಾರೆ.

ಇದನ್ನೂ ಓದಿ:ಸಂಘರ್ಷದ ವಾತಾವರಣದಲ್ಲಿಯೂ ಶಾಂತಿ - ಸುವ್ಯವಸ್ಥೆ ಕಾಪಾಡಿದ್ದೇವೆ: ಸಿಎಂ ಬೊಮ್ಮಾಯಿ

ABOUT THE AUTHOR

...view details