ಕೊಳ್ಳೇಗಾಲ:ಬಾಡಿಗೆ ಕೊಡುವ ಸೊಗಿನಲ್ಲಿ ಕಟ್ಟಡ ಮಾಲೀಕನಿಗೆ ಚಾಕು ಇರಿದು ಪರಾರಿಯಾಗಿದ್ದ ಆರೋಪಿಯನ್ನು ಪಟ್ಟಣ ಪೊಲೀಸರು ಬಂಧಿಸಿದ್ದಾರೆ.
ಕೊಳ್ಳೇಗಾಲ: ಚಾಕುವಿನಿಂದ ಇರಿದು ತಲೆಮರೆಸಿಕೊಂಡಿದ್ದ ಆರೋಪಿ ಬಂಧನ - who allegedly stabbing
ಮಂಜುನಾಥ್ ಬಂಧಿತ ಆರೋಪಿ ಎರಡು ದಿನಗಳ ಹಿಂದೆ ಡಾ.ರಾಜ್ ರಸ್ತೆಯಲ್ಲಿ ಇರುವ ಕೆ.ಎನ್.ಕೆ ಮ್ಯಾನ್ಶನ್ ಕಟ್ಟಡ ಮಾಲೀಕ ನಾಗೇಂದ್ರ ಗುಪ್ತನ ಮನೆಗೆ ತೆರಳಿ ಬಾಡಿಗೆ ಕೊಡುವ ನೆಪದಲ್ಲಿ ಆತನಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ. ಹಲ್ಲೆಗೆ ಒಳಗಾದ ನಾಗೇಂದ್ರ ಗುಪ್ತ ಈ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಿದ್ದ.
ಪಟ್ಟಣದ ದೇವಾಂಗ ಪೇಟೆ ನಿವಾಸಿ ಮಂಜುನಾಥ್ ಬಂಧಿತ ಆರೋಪಿ. ಈತ ಕಳೆದ ಎರಡು ದಿನಗಳ ಹಿಂದೆ ಡಾ.ರಾಜ್ ರಸ್ತೆಯಲ್ಲಿ ಇರುವ ಕೆ.ಎನ್.ಕೆ ಮ್ಯಾನ್ಶನ್ ಕಟ್ಟಡ ಮಾಲೀಕ ನಾಗೇಂದ್ರ ಗುಪ್ತನ ಮನೆಗೆ ತೆರಳಿ ಬಾಡಿಗೆ ಕೊಡುವ ನೆಪದಲ್ಲಿ ಆತನಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ. ಹಲ್ಲೆಗೆ ಒಳಗಾದ ನಾಗೇಂದ್ರ ಗುಪ್ತ ಈ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಿದ್ದ.
ತನಿಖೆ ಕೈಗೊಂಡ ಠಾಣೆಯ ಪಿಎಸ್ಐ ತಾಜುವುದ್ದೀನ್ ತಲೆಮರೆಸಿಕೊಂಡಿದ್ದ ಆರೋಪಿ ಮಂಜುನಾಥ್ನನ್ನು ಟಿ.ನರಸೀಪುರದಲ್ಲಿ ಪತ್ತೆ ಮಾಡಿ ಕರೆತಂದು ಬಂಧಿಸಿದ್ದಾರೆ. ವಿಚಾರಣೆ ವೇಳೆ ಬಾಡಿಗೆ ಹೆಚ್ಚಳ ಮಾಡುವುದರ ಬಗ್ಗೆ ಮಾಲೀಕನಿಗೂ ಆರೋಪಿಗೂ ವಾಗ್ವಾದ ನಡೆದಿರುವುದು ತಿಳಿದು ಬಂದಿದೆ. ಸದ್ಯ ಬಂಧಿತ ಆರೋಪಿಯ ಮೇಲೆ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯದ ಮುಂದೆ ಹಾಜರಿಪಡಿಸಲಾಗಿದೆ.