ಚಾಮರಾಜನಗರ: ಶಂಕಿತ ಉಗ್ರರ ನಂಟು ಗಡಿಜಿಲ್ಲೆಗೂ ದಾಟಿದ್ದು, ಇಬ್ಬರನ್ನು ಭಯೋತ್ಪಾದನಾ ನಿಗ್ರಹ ದಳ ಮತ್ತು ಚಾಮರಾಜನಗರ ಜಿಲ್ಲಾ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಗಡಿಜಿಲ್ಲೆಗೂ ದಾಟಿತು ಉಗ್ರರ ನಂಟು: ಇಬ್ಬರು ಶಂಕಿತ ಉಗ್ರಗಾಮಿಗಳ ಬಂಧನ - ಗಡಿಜಿಲ್ಲೆಗೆ ದಾಟಿದ ಉಗ್ರರು
ಶಂಕಿತ ಉಗ್ರರ ನಂಟು ಗಡಿಜಿಲ್ಲೆಗೂ ದಾಟಿದ್ದು, ಇಬ್ಬರನ್ನು ಭಯೋತ್ಪಾದನಾ ನಿಗ್ರಹ ದಳ ಮತ್ತು ಚಾಮರಾಜನಗರ ಜಿಲ್ಲಾ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಖಚಿತ ಮಾಹಿತಿಮೇರೆಗೆ ಶನಿವಾರ ತಡರಾತ್ರಿ ಮೌಲ್ವಿ ಮತ್ತು ಮತ್ತೋರ್ವನನ್ನು ವಶಕ್ಕೆ ಪಡೆದು ಬೆಂಗಳೂರಿನಲ್ಲಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ತಮಿಳುನಾಡು, ಕೇರಳ ರಾಜ್ಯಗಳಲ್ಲಿ ಹಿಂದು ಸಂಘಟನೆಗಳ ಮುಖಂಡರನ್ನು ಗುರಿಯಾಗಿಸಿಕೊಂಡು ಗಲಭೆ ಇನ್ನಿತರೆ ಚಟುವಟುಕೆಯಲ್ಲಿ ಭಾಗಿಯಾಗಿದ್ದರೆನ್ನಲಾಗಿದ್ದು, ನಿಷೇಧಿತ ಉಗ್ರ ಸಂಘಟನೆಯಾದ ಅಲ್ ಉಮ್ಮದ್ನ ಸದಸ್ಯರು ಇವರಾಗಿದ್ದಾರೆ ಎನ್ನಲಾಗಿದೆ.
ತಮಿಳುನಾಡಿನಲ್ಲಿ ಹಿಂದು ಸಂಘಟನೆಯ ಪಾಂಡಿ ಸುರೇಶ ಎಂಬಾತನ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ತಂಡದ ಸದಸ್ಯರು ನೀಡಿದ್ದ ಸುಳಿವಿನ ಆಧಾರದ ಮೇಲೆ ಇವರಿಬ್ಬರನ್ನು ಬಂಧಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿದ್ದು, ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.