ಚಾಮರಾಜನಗರ: ಜಿಂಕೆ ಚರ್ಮವನ್ನು ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಕೊಳ್ಳೇಗಾಲ ತಾಲೂಕಿನ ನರೀಪುರ ಗ್ರಾಮದ ಸಮೀಪ ನಡೆದಿದೆ.
ಬೈಕ್ನಲ್ಲಿ ಅಕ್ರಮ ಜಿಂಕೆ ಚರ್ಮ ಸಾಗಾಟ: ಇಬ್ಬರ ಬಂಧನ - ಈಟಿವಿ ಭಾರತ ಕನ್ನಡ
ಬೈಕಿನ ಡಿಕ್ಕಿಯಲ್ಲಿ ಅಕ್ರಮವಾಗಿ ಜಿಂಕೆ ಚರ್ಮ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಚಾಮರಾಜನಗರ: ಬೈಕ್ನಲ್ಲಿ ಜಿಂಕೆ ಚರ್ಮ ಸಾಗಿಸುತ್ತಿದ್ದ ಇಬ್ಬರ ಬಂಧನ
ನಂಜನಗೂಡು ತಾಲೂಕಿನ ದೊಡ್ಡ ಕವಲಂದೆ ಗ್ರಾಮದ ಮೆಕಾನಿಕ್ ಇಫ್ತೆಕರ್ ಅಹಮದ್ ಖಾನ್ ಹಾಗೂ ಚಾಲಕ ಅಬ್ದುಲ್ ಮುತ್ತಾಲಿಕ್ ಬಂಧಿತ ಆರೋಪಿಗಳು. ಬೈಕಿನ ಡಿಕ್ಕಿಯಲ್ಲಿ ಅಕ್ರಮವಾಗಿ ಜಿಂಕೆ ಚರ್ಮ ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಅರಣ್ಯ ಸಂಚಾರಿ ದಳವು ದಾಳಿ ನಡೆಸಿ ಇವರಿಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿಂದ ಎರಡು ಜಿಂಕೆಗಳ ಚರ್ಮ, ಮೊಬೈಲ್, ಬೈಕ್ ವಶಪಡಿಸಿಕೊಂಡು ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದನ್ನೂ ಓದಿ:ಬರ್ತ್ಡೇ ಪಾರ್ಟಿಯಲ್ಲಿದ್ದ ಗೆಳೆಯರ ಮೇಲೆ ಹಲ್ಲೆ ನಡೆಸಿ, ಹಣ ದೋಚಿ ಪರಾರಿಯಾಗಿದ್ದ ಆರು ಮಂದಿಯ ಬಂಧನ