ಚಾಮರಾಜನಗರ: ಆಮ್ಲಜನಕ ದುರಂತದ ತನಿಖಾ ಆಯೋಗದ ಕಚೇರಿಯನ್ನು ಮೈಸೂರಿನಿಂದ ಚಾಮರಾಜನರಕ್ಕೆ ಸ್ಥಳಾಂತರಿಸಬೇಕೆಂದು ಎಸ್ಡಿಪಿಐ ಸಂಘಟನೆ ಒತ್ತಾಯಿಸಿ ನ್ಯಾ. ಬಿ.ಎ ಪಾಟೀಲ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಸಂತ್ರಸ್ತರು ಚಾಮರಾಜನಗರ ಜಿಲ್ಲೆಯ ಬೇರೆ ಬೇರೆ ತಾಲೂಕಿನ ಹಳ್ಳಿಗಳಲ್ಲಿ ವಾಸ ಮಾಡುತ್ತಿದ್ದಾರೆ. ಇವರು ತಮ್ಮ ದೂರು ಬರೆಸಲು, ಟೈಪ್ ಮಾಡಿಸಲು ಮತ್ತು ಅಫಿಡವಿಡ್ ಮಾಡಿಸಲು ತಾಲೂಕು ಕೇಂದ್ರಗಳಿಗೆ ಅಥವಾ ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಬರಬೇಕು. ಲಾಕ್ಡೌನ್ ಇರುವುದರಿಂದ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲೂ ಸಹ ಟೈಪಿಂಗ್ ಮಳಿಗೆಗಳು ಇಲ್ಲ. ಮೈಸೂರಿಗೆ ಬಂದು ಹೋಗಲು ಯಾವುದೇ ಬಸ್ ವ್ಯವಸ್ಥೆ ಸಹ ಇಲ್ಲ ಹೀಗಾಗಿ ಕಚೇರಿ ಸ್ಥಳಾಂತರಿಸುವಂತೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ.