ಚಾಮರಾಜನಗರ:ಕೊರೊನಾ ಸೋಂಕಿನಿಂದಾಗಿ ಗುಂಡ್ಲುಪೇಟೆಯ ಹೆಡ್ ಕಾನ್ಸ್ಟೇಬಲ್ವೊಬ್ಬರು ಇಂದು ಬೆಳಗಿನ ಜಾವ ಮೃತಪಟ್ಟಿದ್ದಾರೆ.
ಕೊರೊನಾಗೆ ಚಾಮರಾಜನಗರದ ಮತ್ತೋರ್ವ ಕಾನ್ಸ್‌ಟೇಬಲ್ ಬಲಿ - Head Constable of Gundlupete
ಚಾಮರಾಜನಗರ ಜಿಲ್ಲೆಯ ಕೊರೊನಾ ಸೋಂಕಿನಿಂದಾಗಿ ಗುಂಡ್ಲುಪೇಟೆಯ ಹೆಡ್ ಕಾನ್ಸ್ಟೇಬಲ್ವೊಬ್ಬರು ಇಂದು ಬೆಳಗಿನ ಜಾವ ಮೃತಪಟ್ಟಿದ್ದಾರೆ.
ಕೊರೊನಾಗೆ ಚಾಮರಾಜನಗರದ ಮತ್ತೋರ್ವ ಕಾನ್ಸ್‌ಟೇಬಲ್ ಬಲಿ
ಚಾಮರಾಜನಗರ ತಾಲೂಕಿನ ಕಿಲಗೆರೆ ಗ್ರಾಮದ 46 ವರ್ಷದ ವ್ಯಕ್ತಿಯೊಬ್ಬರು ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್‌ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕಳೆದ 14ರಂದು ಕೊರೊನಾ ಸೋಂಕು ದೃಢಪಟ್ಟು ಮೈಸೂರಿನ ಕಾವೇರಿ ಆಸ್ಪತ್ರೆಗೆ ದಾಖಲಾಗಿ ಇಂದು ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ.
ಮೃತರು ಓರ್ವ ಪುತ್ರ, ಪತ್ನಿಯನ್ನು ಅಗಲಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ಮೂವರು ಪೊಲೀಸ್ ಸಿಬ್ಬಂದಿ ಕೊರೊನಾಗೆ ಬಲಿಯಾಗಿದ್ದಾರೆ.