ಚಾಮರಾಜನಗರ: ಜೆಸಿಬಿ ಸದ್ದಿಗೆ ಪೊದೆಯಲ್ಲಿ ಸೇರಿದ್ದ ಭಾರೀ ಗಾತ್ರದ ಹೆಬ್ಬಾವೊಂದನ್ನು ರಕ್ಷಿಸಲಾಗಿದೆ. ಈ ಹೆಬ್ಬಾವನ್ನು ಕಂಡ ಜನರು ಬೆಚ್ಚಿಬಿದ್ದರು.
ಜಿಲ್ಲೆಯ ಯಳಂದೂರು ತಾಲೂಕಿನ ದಾಸನಹುಂಡಿ ಗ್ರಾಮದ ವೆಂಕಟರೆಡ್ಡಿ ಎಂಬುವರ ತೋಟದಲ್ಲಿ ಜೆಸಿಬಿ ಕೆಲಸ ನಡೆಯುತ್ತಿರುವಾಗ ಜೆಸಿಬಿ ಸದ್ದಿಗೆ ಹೆಬ್ಬಾವು ಪೊದೆಯೊಳಕ್ಕೆ ಸೇರಿತು. ಹಾವು ಕಂಡು ಭಯಬೀತರಾದ ಕೆಲಸಗಾರರು ದಿಕ್ಕಾಪಾಲಾಗಿ ಓಡಿದ್ದಾರೆ.
ಬಳಿಕ ಉರಗ ಪ್ರೇಮಿ ಸ್ನೇಕ್ ಮಹೇಶ್ ಅವರಿಗೆ ಕರೆಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಸ್ನೇಕ್ ಮಹೇಶ್ 1 ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಪೊದೆ ಸೇರಿದ್ದ ಹೆಬ್ಬಾವನ್ನು ರಕ್ಷಿಸಿದ್ದಾರೆ.
ಬರೋಬ್ಬರಿ 12ಅಡಿ ಉದ್ದವಿದ್ದ ಹೆಬ್ಬಾವು 50ಕೆ.ಜಿಗಿಂತಲೂ ಹೆಚ್ಚು ತೂಕವಿತ್ತು ಎಂದು ಅಂದಾಜಿಸಲಾಗಿದೆ.ಈವರೆಗೆ ನಾನು ರಕ್ಷಿಸಿದ್ದ ಹೆಬ್ಬಾವುಗಳಲ್ಲೇ ಇದು ಅತ್ಯಂತ ದೊಡ್ಡದು. ಈ ಹಾವು ಏನನ್ನೋ ನುಂಗಿದೆ. ಆದ್ದರಿಂದ ಚಲಿಸಲು ಸಾಧ್ಯವಾಗುತ್ತಿಲ್ಲ. ಎಲ್ಲ ರೀತಿಯ ಉರಗಳನ್ನು ಕೊಲ್ಲಬೇಡಿ ಎಂದು ಸುತ್ತಮುತ್ತಲಿನ ಎಲ್ಲಾ ಫಾರ್ಮ್ಗಳಿಗೆ ಭೇಟಿ ನೀಡಿ ಅರಿವು ಮೂಡಿಸಿದ್ದೇನೆ ಎಂದು ಸ್ನೇಕ್ ಮಹೇಶ್ ತಿಳಿಸಿದರು.