ಕರ್ನಾಟಕ

karnataka

ETV Bharat / state

ದನದ ‌ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ: ಎರಡು ಬೈಕ್ ಸುಟ್ಟು‌ ಭಸ್ಮ, ಹಸುಗಳಿಗೂ ಗಾಯ - fire in lair at kollegala

ಕೊಳ್ಳೇಗಾಲ ಪಟ್ಟಣದ ಮುಳ್ಳೂರು ಗ್ರಾಮದ‌ ಮಹದೇವ ಅವರ ಮನೆಯ ಹಿಂಭಾಗ ಇದ್ದ ದನದ ಕೊಟ್ಟಿಗೆಗೆ ಇದ್ದಕ್ಕಿದಂತೆ ಬೆಂಕಿ ತಗುಲಿದ್ದು, ಒಳಗಡೆ ನಿಲ್ಲಿಸಿದ್ದ ಬೈಕ್‌ಗಳು ಭಸ್ಮಗೊಂಡು, ಹಸುಗಳು ಗಾಯಗೊಂಡಿವೆ.

kollegala
ಎರಡು ಬೈಕ್ ಸುಟ್ಟು‌ ಭಸ್ಮ

By

Published : Feb 8, 2021, 11:23 AM IST

ಕೊಳ್ಳೇಗಾಲ: ದನದ‌ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ತಗುಲಿ ಒಳಗಡೆ ನಿಲ್ಲಿಸಿದ್ದ ಬೈಕ್‌ಗಳು ಭಸ್ಮಗೊಂಡು, ಹಸುಗಳು ಗಾಯಗೊಂಡಿರುವ ಘಟನೆ ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ನಡೆದಿದೆ.

ಮುಳ್ಳೂರು ಗ್ರಾಮದ‌ ಮಹದೇವ ಅವರ ಮನೆಯ ಹಿಂಭಾಗ ಇದ್ದ ದನದ ಕೊಟ್ಟಿಗೆಗೆ ಇದ್ದಕ್ಕಿದ್ದಂತೆ ಬೆಂಕಿ ತಗುಲಿ ಕೊಟ್ಟಿಗೆಯು ಹೊತ್ತಿ‌ ಉರಿದಿದ್ದು, ಸ್ಥಳೀಯರು ತಕ್ಷಣ ಕೊಟ್ಟಿಗೆಯೊಳಗಿದ್ದ ಹಸುಗಳನ್ನು ರಕ್ಷಣೆ ಮಾಡಿದ್ದಾರೆ.

ದನದ‌ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ಬಿದ್ದು ಸಂಪೂರ್ಣ ಸುಟ್ಟು ಹೋಗಿದೆ.

ಇನ್ನು ಹಸುಗಳಿಗೆ ಬೆಂಕಿ‌ ತಗುಲಿ ಗಾಯಗಳಾಗಿದ್ದು ಪ್ರಾಣಾಪಾಯ ಸಂಭವಿಸಿಲ್ಲ.‌ ಆದರೆ‌ ಕೊಟ್ಟಿಗೆಯೊಳಗೆ ನಿಲ್ಲಿಸಿದ್ದ ಟಿ.ವಿಎಸ್ ಹಾಗೂ ಹೀರೋ ಫ್ಯಾಷನ್ ಬೈಕ್​ಗಳು ಸುಟ್ಟು ‌ಕರಕಲಾಗಿವೆ.

ಓದಿ:ದೇವನಹಳ್ಳಿ ರೆಸಾರ್ಟ್​ನಿಂದ ಚೆನ್ನೈನತ್ತ ಶಶಿಕಲಾ ಪ್ರಯಾಣ: ಖಾಸಗಿ ವಿಐಪಿ ಎಸ್ಕಾರ್ಟ್ ಭದ್ರತೆ

ಒಂದು ಎಕರೆಯಷ್ಟು ಹುಲ್ಲಿನ ಬಣವೆ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಆನಂತರ ಅಗ್ನಿಶಾಮಕ ದಳ‌ ಸಿಬ್ಬಂದಿ‌ ದೌಡಾಯಿಸಿ ಬೆಂಕಿ‌ ನಂದಿಸಿದ್ದಾರೆ. ಈ ಘಟನೆಯಿಂದಾಗಿ ಲಕ್ಷಾಂತರ ರೂ‌ಪಾಯಿ ನಷ್ಟವಾಗಿದೆ.

ABOUT THE AUTHOR

...view details