ಚಾಮರಾಜನಗರ:ಮತದಾರರ ಮಾಹಿತಿ ಕನ್ನ ಹಾಕಿರುವುದು ನಾವಲ್ಲ, ಮೈತ್ರಿ ಸರ್ಕಾರದ ತಪ್ಪನ್ನು ನಮ್ಮ ಮೇಲೆ ಹೊರಿಸುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ಕೊಟ್ಟಿದ್ದಾರೆ. ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರದ ಅವಧಿಯಲ್ಲಿ ಆ ಸಂಸ್ಥೆಗೆ ಆದೇಶ ನೀಡಿದ್ದು ನಾವಲ್ಲ. ತಾವು ಮಾಡಿದ್ದ ತಪ್ಪನ್ನು ಕಾಂಗ್ರೆಸ್ ನಮ್ಮ ಮೇಲೆ ಹೊರಿಸುತ್ತಿದೆ ಎಂದು ತಿರುಗೇಟು ಕೊಟ್ಟಿದ್ದಾರೆ.
ಈ ಕೆಲಸ ಮಾಡಿದ್ದು ಮೈತ್ರಿ ಸರ್ಕಾರ: ಆದರೆ ಆರೋಪ ನಮ್ಮ ಮೇಲೆ... ಸಚಿವ ಸೋಮಣ್ಣ - ಆದರೆ ಆರೋಪ ನಮ್ಮ ಮೇಲೆ
ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ, ಮತದಾರರ ಮಾಹಿತಿ ಕನ್ನ ಹಾಕಿರುವುದು ನಾವಲ್ಲ, ಮೈತ್ರಿ ಸರ್ಕಾರ ಎಂದು ತಿರುಗೇಟು ನೀಡಿದ್ದಾರೆ.
ವಸತಿ ಇಲಾಖೆ, ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆ ಮತ್ತು ಚಾಮರಾಜನಗರ ಜಿಲ್ಲಾ ಉಸ್ತವಾರಿ ಸಚಿವರು ವಿ.ಸೋಮಣ್ಣ
ಕಾಂಗ್ರೆಸ್ನವರ ಆರೋಪ ಬಾಲಿಷತನದಿಂದ ಕೂಡಿದೆ ಎಂದು ಸಚಿವ ಸೋಮಣ್ಣ ಕಿಡಿಕಾರಿದ್ದಾರೆ. ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇದ್ದು ಕಾಂಗ್ರೆಸ್ ಜನರನ್ನು ಕಕ್ಕಾಬಿಕ್ಕಿ ಮಾಡುತ್ತಿದ್ದಾರೆ, ಆದರೆ, ಎಲ್ಲವನ್ನೂ ನಂಬಲು ಜನರು ಕೂಡ ದಡ್ಡರಲ್ಲ ಎಂದ ಅವರು, ಸಿಎಂ ತನಿಖೆಗೆ ಆದೇಶಿಸಿದ್ದು ಶೀಘ್ರವೇ ತಪ್ಪಿತಸ್ಥರು ಯಾರು ಎಂಬುದು ತಿಳಿಯಲಿದೆ ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ :ಮತದಾರರ ಮಾಹಿತಿ ಕಳವು ಆರೋಪ: ತನಿಖೆಗೆ ಚು.ಆಯೋಗ ಸೂಚನೆ