ಕರ್ನಾಟಕ

karnataka

ETV Bharat / state

ವಿದ್ಯಾಗಮದಲ್ಲಿ ಅಸ್ಪೃಶ್ಯತೆ ಆರೋಪ: ಶಿಕ್ಷಕಿ ಅಮಾನತು, ಮುಖ್ಯ ಶಿಕ್ಷಕ ವರ್ಗಾವಣೆ - Teacher of Chikkati Primary School Nagamani suspend

ವಿದ್ಯಾಗಮ ಕಲಿಕಾ ಕೇಂದ್ರಕ್ಕೆ ದಲಿತ ವಿದ್ಯಾರ್ಥಿಗಳನ್ನು ಸೇರಿಸಬಾರದು ಎಂದು ಸ್ಥಳೀಯ ಮುಖಂಡರೊಬ್ಬರು ಶಾಲಾ ಶಿಕ್ಷಕರಿಗೆ ತಾಕೀತು ಮಾಡಿದ ಹಿನ್ನೆಲೆ ಕನಕ ಭವನದ ಒಳಗೆ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಅವಕಾಶ ನೀಡದೆ ಹೊರಗೆ ಕೂರಿಸಿ ಪಾಠ ಬೋಧನೆ ಮಾಡಿದ ಆರೋಪದ ಮೇಲೆ ಗುಂಡ್ಲುಪೇಟೆ ತಾಲೂಕಿನ ಚಿಕ್ಕಾಟಿ ಪ್ರಾಥಮಿಕ ಶಾಲೆಯ ಶಿಕ್ಷಕಿ ನಾಗಮಣಿ ಎಂಬುವರನ್ನು ಅಮಾನತುಗೊಳಿಸಲಾಗಿದೆ.

ಚಾಮರಾಜನಗರ ವಿದ್ಯಾಗಮದಲ್ಲಿ ಅಸ್ಪೃಶ್ಯತೆ ಆರೋಪ teacher Suspend in Chamrajanagar
ಚಾಮರಾಜನಗರ ವಿದ್ಯಾಗಮದಲ್ಲಿ ಅಸ್ಪೃಶ್ಯತೆ ಆರೋಪ

By

Published : Oct 9, 2020, 10:43 AM IST

ಚಾಮರಾಜನಗರ: ವಿದ್ಯಾಗಮ‌ ಕಲಿಕೆ ವೇಳೆ ಕೆಲ ವಿದ್ಯಾರ್ಥಿಗಳನ್ನು ಕೊಠಡಿಯಿಂದ ಹೊರಗಿಟ್ಟ ಆರೋಪದ ಮೇಲೆ ಗುಂಡ್ಲುಪೇಟೆ ತಾಲೂಕಿನ ಚಿಕ್ಕಾಟಿ ಪ್ರಾಥಮಿಕ ಶಾಲೆಯ ಶಿಕ್ಷಕಿ ನಾಗಮಣಿ ಎಂಬುವರನ್ನು ಅಮಾನತುಗೊಳಿಸಲಾಗಿದೆ.

ಅಸ್ಪೃಶ್ಯತೆ ಆಚರಣೆ ಖಂಡಿಸಿ ಕರ್ನಾಟಕ ವಿದ್ಯಾರ್ಥಿ ಯುವ ವೇದಿಕೆಯಿಂದ ಪ್ರತಿಭಟನೆ

ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಮಹದೇವ ನಾಯಕ ಅವರನ್ನು ಕೂತುನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆ ಮಾಡಲಾಗಿದೆ. ಅ. 1ರಂದು ಚಿಕ್ಕಾಟಿ ಗ್ರಾಮದ ಕನಕ ಭವನದಲ್ಲಿ ಶಿಕ್ಷಣ ಇಲಾಖೆಯು ಆರಂಭಿಸಿದ್ದ ವಿದ್ಯಾಗಮ ಕಲಿಕಾ ಕೇಂದ್ರಕ್ಕೆ ದಲಿತ ವಿದ್ಯಾರ್ಥಿಗಳನ್ನು ಸೇರಿಸಬಾರದು ಎಂದು ಸ್ಥಳೀಯ ಮುಖಂಡರೊಬ್ಬರು ಶಾಲಾ ಶಿಕ್ಷಕರಿಗೆ ತಾಕೀತು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕನಕ ಭವನದ ಒಳಗೆ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಅವಕಾಶ ನೀಡದೆ ಹೊರಗೆ ಕೂರಿಸಿ ಪಾಠ ಬೋಧನೆ ಮಾಡಿದ ಆರೋಪ ಕೇಳಿ ಬಂದಿತ್ತು.

ಪಾಠ ಕೇಳಲು ಹೋದ ದಲಿತ ಮಕ್ಕಳಿಗೆ ಅವಮಾನ ಪ್ರಕರಣ: ಚಿಕ್ಕಾಟಿ ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಪಡೆದ ಅಧಿಕಾರಿಗಳು

ಘಟನೆ ಸಂಬಂಧ ಬುಧವಾರ ಗ್ರಾಮಕ್ಕೆ ಭೇಟಿ ನೀಡಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಸಿ.ಶಿವಮೂರ್ತಿ ಅಲ್ಲಿನ ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರಿಂದ ಹೇಳಿಕೆ ಪಡೆದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ವರದಿ ಸಲ್ಲಿಸಿದ್ದರು. ವರದಿ ಆಧಾರದ ಮೇಲೆ ಡಿಡಿಪಿಐ ಎಸ್‌.ಟಿ.ಜವರೇಗೌಡ ಅವರು ಅಮಾನತು ಆದೇಶ ಹೊರಡಿಸಿದ್ದಾರೆ.

ABOUT THE AUTHOR

...view details