ಚಾಮರಾಜನಗರ:ಪ್ರಸಿದ್ಧ ಯಾತ್ರಾಸ್ಥಳವಾದ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದ ದೇಗುಲದಲ್ಲಿ ಮೈಸೂರು ರಾಜವಂಶಸ್ಥರ ಫೋಟೋ ತೆರವುಗೊಳಿಸಿರುವ ಆರೋಪ ಕೇಳಿ ಬಂದಿದೆ.
ಬಿಳಿಗಿರಿರಂಗನ ಬೆಟ್ಟ ದೇಗುಲದ ಸಂಪ್ರೋಕ್ಷಣೆ ಬಳಿ ಹಾಕಲಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಜಯಚಾಮರಾಜ ಒಡೆಯರ್ ಫೋಟೋಗಳನ್ನು ದೇವಾಲಯ ಆಡಳಿತ ಮಂಡಳಿ ತೆರವುಗೊಳಿಸಿದೆ. ಫೋಟೋ ತೆಗೆದು ಹಾಕಿ ಅವಮಾನ ಎಸಗಿದ್ದಾರೆಂದು ಕೆಲ ಭಕ್ತರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.