ಕೊಳ್ಳೇಗಾಲ: ಕೊರೊನಾ ಸಂಕಷ್ಟದ ನಡುವೆಯೂ ಪಟ್ಟಣದ ಸ್ಕ್ಯಾನಿಂಗ್ ಸೆಂಟರ್ ಒಂದು ಹೆಚ್ಚಿನ ಹಣ ಪೀಕುತ್ತಿರುವ ಬಗ್ಗೆ ಸಾರ್ವಜನಿಕರು ಆರೋಪಿಸಿದ್ದಾರೆ.
ನಗರದ ಎಂ.ಜಿ.ಎಸ್.ವಿ ಜೂನಿಯರ್ ಕಾಲೇಜು ಬಳಿಯ ಪ್ರಸಾದ್ ಡಯೋಗ್ನಾಸ್ಟಿಕ್ ಸ್ಕ್ಯಾನಿಂಗ್ ಸೆಂಟರ್ನಲ್ಲಿ ಸಿ.ಟಿ ಸ್ಕ್ಯಾನಿಂಗ್ಗೆ ಸರ್ಕಾರ ನಿಗದಿ ಮಾಡಿರುವ ದರಕ್ಕಿಂತ ದುಪ್ಪಟ್ಟು ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಸ್ಕ್ಯಾನಿಂಗ್ ಸೆಂಟರ್ನಿಂದ ಸುಲಿಗೆ ಆರೋಪ ಸರ್ಕಾರ ಕೋವಿಡ್ ಸಮಯದಲ್ಲಿ ಬಿಪಿಎಲ್ ಕಾರ್ಡ್ದಾರರಿಗೆ ಸಿಟಿ ಸ್ಕ್ಯಾನಿಂಗ್ಗೆ 1,500 ರೂ, ಎಪಿಎಲ್ ಕಾರ್ಡ್ದಾರರಿಗೆ 2,500 ರೂ ಪಡೆಯುವಂತೆ ಸರ್ಕಾರ ಆದೇಶ ಹೊರಡಿಸಿದೆ. ಪ್ರಸಾದ್ ಡಯಾಗ್ನಸ್ಟಿಕ್ ಸ್ಕ್ಯಾನಿಂಗ್ ಸೆಂಟರ್ ಈ ಆದೇಶವನ್ನು ಗಾಳಿಗೆ ತೂರಿದೆ ಎಂದು ಹೇಳಲಾಗ್ತಿದೆ. ಸ್ಕ್ಯಾನಿಂಗ್ ಮಾಡಿಸಲು ಬಂದಿದ್ದ ಮಹಿಳೆಯೊಬ್ಬರಿಂದ ಸಿ.ಟಿ ಸ್ಕ್ಯಾನ್ ಎಂದು ಬಿಲ್ ಕೊಟ್ಟು 2,500 ರೂ ತೆಗೆದುಕೊಂಡಿದಲ್ಲದೆ, ಇತರ ದರ ಎಂದು 1,500 ಹಣ ವಸೂಲಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ವೈದ್ಯರನ್ನು ಕೇಳಿದ್ರೆ, ವೈದ್ಯ ಡಾ. ಎಂ.ಬಿ ನಾಗಪ್ರಸಾದ್ ಅವರನ್ನು ಕೇಳಿದ್ರೆ, ಉಡಾಫೆಯ ಉತ್ತರ ನೀಡುತ್ತಿದ್ದು, ಸ್ಯಾನಿಟೈಸ್ಗಾಗಿ ಹಣ ಪಡೆಯಲಾಗಿದೆ ಎಂದು ಹೇಳುತ್ತಿದ್ದಾರಂತೆ.
ಹೆಚ್ಚಿನ ಹಣ ಪಡೆದಿರುವ ರಶೀದಿ ಇದನ್ನೂಓದಿ : ಈಟಿವಿ ಭಾರತ ಫಲಶ್ರುತಿ: ರೋಗಿಗಳಿಂದ ಹಣ ಪೀಕುತ್ತಿದ್ದ ಆಸ್ಪತ್ರೆಗಳಿಗೆ ನೋಟಿಸ್
ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ತಹಶೀಲ್ದಾರ್ ಕುನಾಲ್ ಹಾಗೂ ತಾಲೂಕು ವೈದ್ಯಾಧಿಕಾರಿ ಗೋಪಾಲ್ ಸ್ಕ್ಯಾನಿಂಗ್ ಸೆಂಟರ್ಗೆ ಭೇಟಿ ನೀಡಿ, ವೈದ್ಯ ನಾಗಪ್ರಸಾದ್ ಅವರಿಂದ ಮಾಹಿತಿ ಪಡೆದಿದ್ದಾರೆ. ಅಧಿಕಾರಿಗಳ ಪರಿಶೀಲನೆ ವೇಳೆ ಹೆಚ್ಚಿನ ಹಣ ಅವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ತಹಶೀಲ್ದಾರ್ ಕುನಾಲ್, ವೈದ್ಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ಮುಂದೆ ಈ ರೀತಿಯ ಘಟನೆ ಮರುಕಳಿಸದಂತೆ ಎಚ್ಚರಿಕೆ ನೀಡಿದ್ದಾರೆ. ಕೊರೊನಾ ಸಮಯದಲ್ಲಿ ಜನರಿಂದ ಹೆಚ್ಚಿನ ಹಣ ವಸೂಲಿ ಮಾಡಬಾರದು, ಸರ್ಕಾರ ನಿಗದಿಪಡಿಸಿದಷ್ಟು ಮಾತ್ರ ಪಡೆಯುವಂತೆ ಖಡಕ್ ಸೂಚನೆ ನೀಡಿದ್ದಾರೆ.
ಈ ಬಗ್ಗೆ ತಾಲೂಕು ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಅವಿನಾಶ್ ಮಾತನಾಡಿ, ಸರ್ಕಾರದ ಆದೇಶವನ್ನು ಕೊಳ್ಳೇಗಾಲದ ಪ್ರಸಾದ್ ಡಯಾಗ್ನೋಸ್ಟಿಕ್ ಸೆಂಟರ್ ಗಾಳಿಗೆ ತೂರುತ್ತಿದೆ. ಸಿ.ಟಿ ಸ್ಕ್ಯಾನಿಂಗ್ಗೆ ಸರ್ಕಾರ ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಹಣ ಪಡೆಯಲಾಗುತ್ತಿದೆ. ಇದು ಮರುಕಳಿಸಿದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.