ಚಾಮರಾಜನಗರ :ಕೇರಳದಲ್ಲಿ ಟೊಮ್ಯಾಟೊ ಜ್ವರ ಕಾಣಿಸಿಕೊಂಡ ಹಿನ್ನೆಲೆ ಮುನ್ನಚ್ಚರಿಕಾ ಕ್ರಮವಾಗಿ ರಾಜ್ಯದ ಗಡಿಯಾದ ಗುಂಡ್ಲುಪೇಟೆ ತಾಲೂಕಿನ ಮೂಲೆಹೊಳೆ ಚೆಕ್ ಪೋಸ್ಟ್ನಲ್ಲಿ ಆರೋಗ್ಯ ಇಲಾಖೆ ಕಟ್ಟೆಚ್ಚರವಹಿಸಿದೆ. ಕೊರೊನಾ ಕಡಿಮೆಯಾದ ಬಳಿಕ ಕೇರಳದಿಂದ ರಾಜ್ಯಕ್ಕೆ ಬಂದು ಹೋಗುವವರ ಸಂಖ್ಯೆ ಹೆಚ್ಚಿರುವ ಹಿನ್ನೆಲೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ವಿಶ್ವೇಶ್ವರಯ್ಯ ಖುದ್ದು ಮೂಲೆಹೊಳೆಗೆ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ.
ಟೊಮ್ಯಾಟೊ ಜ್ವರ : ಮೂಲೆಹೊಳೆ ಚೆಕ್ ಪೋಸ್ಟ್ನಲ್ಲಿ ಕೇರಳದಿಂದ ಬರುವ ಮಕ್ಕಳ ಮೇಲೆ ಕಣ್ಣು
ಚಾಮರಾಜನಗರದ ಗಡಿ ಭಾಗದಲ್ಲಿ ಕೇರಳದಿಂದ ಬರುವ 5 ವರ್ಷದೊಳಗಿನ ಮಕ್ಕಳ ಮೇಲೆ ಕಣ್ಣಿಡಲಾಗಿದೆ. ಟೊಮ್ಯಾಟೊ ಜ್ವರದ ಗುಣ ಲಕ್ಷಣ ತಪಾಸಣೆಗೆ ಮೂವರನ್ನು ನೇಮಿಸಲಾಗಿದೆ..
ಮೂಲೆಹೊಳೆ ಚೆಕ್ ಪೋಸ್ಟ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ವಿಶ್ವೇಶ್ವರಯ್ಯ ಭೇಟಿ
ಕೇರಳದಿಂದ ಬರುವ 5 ವರ್ಷದೊಳಗಿನ ಮಕ್ಕಳ ಮೇಲೆ ಕಣ್ಣಿಟ್ಟಿದ್ದು, ಟೊಮ್ಯಾಟೊ ಜ್ವರದ ಗುಣಲಕ್ಷಣ ತಪಾಸಣೆಗೆ ಮೂವರನ್ನು ನೇಮಿಸಲಾಗಿದೆ. ಒಂದು ವೇಳೆ 5 ವರ್ಷ ನಂತರದ ಮಕ್ಕಳಲ್ಲಿ ಜ್ವರ ಕಾಣಿಸಿಕೊಂಡರೆ ಚಿಕಿತ್ಸೆಗೆ ಗುಂಡ್ಲುಪೇಟೆ ಹಾಗೂ ಕಗ್ಗಳ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲು ಈಗಾಗಲೇ ತಯಾರಿ ಮಾಡಿಕೊಳ್ಳಲಾಗಿದೆ. ಈವರೆಗೆ ಯಾವ ಮಕ್ಕಳಲ್ಲೂ ಜ್ವರದ ಲಕ್ಷಣ ಕಂಡು ಬಂದಿಲ್ಲ ಎಂದು ಡಿಹೆಚ್ಒ ಡಾ.ವಿಶ್ವೇಶ್ವರಯ್ಯ ತಿಳಿಸಿದ್ದಾರೆ.
ಇದನ್ನೂ ಓದಿ:ಕೇರಳದಲ್ಲಿ 80ಕ್ಕೂ ಹೆಚ್ಚು ಮಕ್ಕಳಲ್ಲಿ ಟೊಮೆಟೊ ಜ್ವರ: ಲಕ್ಷಣ, ಕ್ರಮಗಳೇನು? ಸಂಪೂರ್ಣ ವಿವರ..