ಗ್ರಾಪಂ ಚುನಾವಣೆಯಲ್ಲಿ ನಕ್ರಾ ಮಾಡಿದ್ರೆ ಗಡಿಪಾರು ಗ್ಯಾರಂಟಿ.. ಪುಡಿರೌಡಿಗಳ ಬೆವರಿಳಿಸಿದ ಡಿವೈಎಸ್ಪಿ - ಡಿವೈಎಸ್ಪಿ ಪ್ರಿಯದರ್ಶಿನಿ ಸಾಣಿಕೊಪ್ಪ ರೌಡಿಶೀಟರ್ಗಳಿಗೆ ಖಡಕ್ ವಾರ್ನಿಂಗ್
ರೌಡಿಶೀಟರ್ಗಳ ಜಾತಕವೆಲ್ಲಾ ನಮ್ಮ ಬಳಿ ಇದ್ದು, ನಿಮ್ಮ ಮೇಲೆ ಕಣ್ಣಿಟ್ಟಿರುತ್ತೇವೆ. ನಿಮಗೆ ಮತ ಹಾಕುವುದಷ್ಟೇ ಕೆಲಸ ಆಗಬೇಕೆ ಹೊರತು ಗಲಾಟೆ, ಘರ್ಷಣೆ ಮಾಡಿದ್ರೆ, ಪೊಲೀಸ್ ಏನೆಂಬುದು ಗೊತ್ತಾಗಲಿದೆ..
![ಗ್ರಾಪಂ ಚುನಾವಣೆಯಲ್ಲಿ ನಕ್ರಾ ಮಾಡಿದ್ರೆ ಗಡಿಪಾರು ಗ್ಯಾರಂಟಿ.. ಪುಡಿರೌಡಿಗಳ ಬೆವರಿಳಿಸಿದ ಡಿವೈಎಸ್ಪಿ ahead of village panchayath election police held rowdy parade](https://etvbharatimages.akamaized.net/etvbharat/prod-images/768-512-9782600-thumbnail-3x2-cnr.jpg)
ರೌಡಿಶೀಟರ್ಗಳ ಪರೇಡ್
ಚಾಮರಾಜನಗರ :ಗ್ರಾಪಂ ಚುನಾವಣೆ ಹಿನ್ನೆಲೆ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಚಾಮರಾಜನಗರ ಪೂರ್ವ ಠಾಣೆಯಲ್ಲಿ ಡಿವೈಎಸ್ಪಿ ರೌಡಿಶೀಟರ್ಗಳ ಪರೇಡ್ ನಡೆಸಿ ಕ್ಲಾಸ್ ತೆಗೆದುಕೊಂಡರು.
ರೌಡಿಶೀಟರ್ಗಳ ಪರೇಡ್
ರೌಡಿಶೀಟರ್ಗಳ ಜಾತಕವೆಲ್ಲಾ ನಮ್ಮ ಬಳಿ ಇದ್ದು, ನಿಮ್ಮ ಮೇಲೆ ಕಣ್ಣಿಟ್ಟಿರುತ್ತೇವೆ. ನಿಮಗೆ ಮತ ಹಾಕುವುದಷ್ಟೇ ಕೆಲಸ ಆಗಬೇಕೆ ಹೊರತು ಗಲಾಟೆ, ಘರ್ಷಣೆ ಮಾಡಿದ್ರೆ, ಪೊಲೀಸ್ ಏನೆಂಬುದು ಗೊತ್ತಾಗಲಿದೆ. ಮತ ಹಾಕಲಷ್ಟೇ ಗಮನ ಕೊಡಿ, ಬೇರೆಲ್ಲಾ ಕಡೆ ಬಾಲ ಬಿಚ್ಚಲು ಹೋಗಬೇಡಿ, ಕುಮ್ಮಕ್ಕು ಕೊಡಬೇಡಿ ಎಂದು ಪುಡಿ ರೌಡಿಗಳಿಗೆ ಎಚ್ಚರಿಕೆ ನೀಡಿದರು.