ಚಾಮರಾಜನಗರ: ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರ ಹಿಂದೆ ಕಾರ್ಯಕರ್ತರು, ಮುಖಂಡರ ದಂಡೇ ಹರಿದುಬಂದು ಸಾಮಾಜಿಕ ಅಂತರವನ್ನು ಉಲ್ಲಂಘನೆ ಮಾಡಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
'ಕೌರವ'ನ ಹಿಂದೆ ಕಾರ್ಯಕರ್ತರ ದಂಡು; ನಡುವೆ ಅಂತರ ಮರೆತ ಕೃಷಿ ಸಚಿವರು - ಕೃಷಿ ಸಚಿವ ಬಿ.ಸಿ ಪಾಟೀಲ್
ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ಚಾಮರಾಜನಗರದಲ್ಲಿ ನಡೆದ ಮುಖಂಡ ಸಭೆಯಲ್ಲಿ ಸಾಮಾಜಿಕ ಅಂತರವನ್ನು ಕಾಪಾಡದೇ ಕೊರೊನಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ.
!['ಕೌರವ'ನ ಹಿಂದೆ ಕಾರ್ಯಕರ್ತರ ದಂಡು; ನಡುವೆ ಅಂತರ ಮರೆತ ಕೃಷಿ ಸಚಿವರು B.C Patil](https://etvbharatimages.akamaized.net/etvbharat/prod-images/768-512-6749930-thumbnail-3x2-chaiiii.jpg)
ಬಿ.ಸಿ ಪಾಟೀಲ್
ಸಾಮಾಜಿಕ ಅಂತರ ಕಾಪಾಡದ ಸಚಿವ ಬಿ.ಸಿ ಪಾಟೀಲ್
ಲಾಕ್ ಡೌನ್ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳ ಮಾಹಿತಿ ಹಾಗೂ ರೈತ ಮುಖಂಡರ ಸಭೆ ನಡೆಸಲು ಸಚಿವ ಬಿ.ಸಿ.ಪಿ ಚಾಮರಾಜನಗರಕ್ಕೆ ಆಗಮಿಸಿದ್ದ ವೇಳೆ ಅವರನ್ನು ಸ್ವಾಗತಿಸಲು 50 ಕ್ಕೂ ಹೆಚ್ಚು ಕಾರ್ಯಕರ್ತರು, ಮುಖಂಡರು ಸಾಮಾಜಿಕ ಅಂತರ ಮರೆತು ಮುಗಿಬಿದ್ದರು.
ಇನ್ನು, ಅಧಿಕಾರಿಗಳು, ರೈತ ಮುಖಂಡರ ಸಭೆಯಲ್ಲೂ ಕೃಷಿ ಸಚಿವರು ಮಾಸ್ಕ್ ಧರಿಸಿದ್ದರೇ ಹೊರತು ಜನರಿಂದ ಯಾವುದೇ ಅಂತರವನ್ನು ಕಾಪಾಡಿಕೊಂಡಿರಲಿಲ್ಲ. ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕಾದ ಸಚಿವರೇ ನಿಯಮ ಗಾಳಿಗೆ ತೂರಿದರೆ ಹೇಗೆ?
Last Updated : Apr 11, 2020, 5:27 PM IST