ಚಾಮರಾಜನಗರ: ಜಿಲ್ಲೆಯ ನೂತನ ಡಿಸಿಯಾಗಿ ಚಾರುಲತಾ ಸೋಮಲ್ ಅವರು ನಿನ್ನೆ ಸಂಜೆ ಅಧಿಕಾರ ವಹಿಸಿಕೊಳ್ಳುವ ಮೂಲಕ ಗಡಿಜಿಲ್ಲೆಯಲ್ಲಿ ಪ್ರಮುಖ ಆಯಕಟ್ಟಿನ ಜಾಗದಲ್ಲಿ ಮಹಿಳಾ ಪವರ್ ಮೇಳೈಸಿದೆ.
ಚಾಮರಾಜನಗರದಲ್ಲಿ 'ಸ್ತ್ರೀ' ಪವರ್... ಎಡಿಸಿ, ಎಸ್ಪಿ, ಸಿಇಒ ಬಳಿಕ ಡಿಸಿಯಾಗಿ ಚಾರುಲತಾ ಸೋಮಲ್ ಅಧಿಕಾರ ಸ್ವೀಕಾರ - ಜಿಲ್ಲಾಧಿಕಾರಿ
ಚಾಮರಾಜನಗರ ಡಿಸಿಯಾಗಿ ಚಾರುಲತಾ ಸೋಮಲ್ ಆಗಮನದ ಮೂಲಕ ಜಿಲ್ಲೆಯಲ್ಲಿನ ಪ್ರಮುಖ ಹೆುದ್ದೆಗಳನ್ನು ಮಹಿಳೆಯರೇ ವಹಿಸಿಕೊಂಡಿರುವುದು ಇಲ್ಲಿನ ವಿಶೇಷವಾಗಿದೆ.
ಜಿಲ್ಲಾಧಿಕಾರಿಯಾಗಿ ಚಾರುಲತಾ ಸೋಮಲ್, ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಕಾತ್ಯಾಯಿನಿ ದೇವಿ, ಪೊಲೀಸ್ ವರಿಷ್ಠಾಧಿಕಾರಿಯಾಗಿ ದಿವ್ಯಾ ಸಾರಾ ಥಾಮಸ್, ಜಿಪಂ ಸಿಇಒ ಆಗಿ ಕೆ.ಎಂ.ಗಾಯತ್ರಿ ಕರ್ತವ್ಯ ನಿರ್ವಹಿಸುತ್ತಿದ್ದು ಸದ್ಯ ಗಡಿಜಿಲ್ಲೆಯಲ್ಲಿ ಮಹಿಳಾ ಆಧಿಕಾರಿಗಳ ಖದರ್ ಹೆಚ್ಚಾಗಿದೆ.
ಇವರೊಟ್ಟಿಗೆ ಚಾಮರಾಜನಗರ ಡಿವೈಎಸ್ಪಿಯಾಗಿ ಪ್ರಿಯದರ್ಶಿನಿ ಸಾಣೆಕೊಪ್ಪ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚಂದ್ರಕಲಾ, ಜಿಲ್ಲಾ ಸಾಂಖ್ಯಿಕ ಸಂಗ್ರಹಣಾಧಿಕಾರಿ ಅನಿತಾ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಭಾಗಿರಥಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ, ಗೀತಾ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಮಂಜುಳಾ, ಜಿಲ್ಲಾ ನೋಂದಣಾಧಿಕಾರಿ ಹಂಸವೇಣಿ ಅವರು ಕೂಡ ಕಾರ್ಯ ನಿರ್ವಹಿಸುವ ಮೂಲಕ ಗಮನ ಸೆಳೆದಿದ್ದಾರೆ.
ಜಿಲ್ಲೆಯಲ್ಲಿ ಬಾಲ್ಯ ವಿವಾಹ ಹೆಚ್ಚಿರುವ ಜೊತೆಗೆ ವಿದ್ಯಾರ್ಥಿನಿಯರು ಹಾಗೂ ಯುವತಿಯರು ಅರ್ಧಕ್ಕೆ ಶಿಕ್ಷಣ ಬಿಡುವುದನ್ನು ನಿಲ್ಲಿಸಲು ಮಹಿಳಾ ಅಧಿಕಾರಿಗಳು ಮುಂದಾಗಬೇಕಿದ್ದು, ಜಿಲ್ಲೆಯ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಈ ಪವರ್ಫುಲ್ ಮಹಿಳೆಯರು ಪ್ರೇರಣೆಯಾಗಲಿದ್ದಾರೆ. ಒಟ್ಟಿನಲ್ಲಿ ದಕ್ಷತೆ, ಕಾರ್ಯಕ್ಷಮತೆಯಲ್ಲಿ ಯಾರಿಗೇನು ಕಮ್ಮಿ ಇಲ್ಲದ ಈ ಪವರ್ಫುಲ್ ಮಹಿಳೆಯರು ಜಿಲ್ಲೆಯ ಅಭಿವೃದ್ಧಿಗೆ ಮತ್ತಷ್ಟು ಶಕ್ತಿ ತುಂಬಬೇಕಿದೆ.