ಕೊಳ್ಳೇಗಾಲ:ಇಲ್ಲಿನ 5,100 ಎಕರೆ ಅಚ್ಚುಕಟ್ಟು ಪ್ರದೇಶದ ಕೃಷಿ ಜಮೀನಿಗೆ ನೀರುಣಿಸುವ ಐತಿಹಾಸಿಕ ಗುಂಡಾಲ್ ಜಲಾಶಯ 43 ವರ್ಷಗಳ ಬಳಿಕ ಭರ್ತಿಯಾಗಿ ಕೋಡಿ ಬಿದ್ದಿರುವುದು ಕೊಳ್ಳೇಗಾಲ ಮತ್ತು ಹನೂರು ಭಾಗದ ರೈತರ ಮೊಗದಲ್ಲಿ ಸಂತಸ ತಂದಿದೆ.
ಬಾಗಿನ ಅರ್ಪಿಸಿದ ಶಾಸಕ ನರೇಂದ್ರ
ಸತತವಾಗಿ ಬಿದ್ದ ಮಳೆಗೆ ಗುಂಡಾಲ್ ಜಲಾಶಯ ಭರ್ತಿಯಾಗಿ ಕೋಡಿ ಬಿದ್ದ ಹಿನ್ನೆಲೆ ಶಾಸಕ ಆರ್.ನರೇಂದ್ರ ಗುರುವಾರ ಜಲದೇವಿಗೆ ಬಾಗಿನ ಅರ್ಪಿಸಿದರು.
ಇದನ್ನೂ ಓದಿ: ದೆಹಲಿ ಆಸ್ಪತ್ರೆಯಲ್ಲೂ 12 ಶಂಕಿತ Omicron ಪ್ರಕರಣ ಪತ್ತೆ?
ಬಳಿಕ ಮಾತನಾಡಿದ ಅವರು, ನೀತಿಸಂಹಿತೆ ಜಾರಿಯಲ್ಲಿರುವ ಹಿನ್ನೆಲೆ ಏಕಾಂಗಿಯಾಗಿ ಬಂದು ಜಲಾಶಯಕ್ಕೆ ಬಾಗಿನ ಅರ್ಪಿಸಿದ್ದೇನೆ. 40 ವರ್ಷದ ಬಳಿಕ ಜಲಾಶಯ ಭರ್ತಿಯಾಗಿದೆ. ಇದು ಕೃಷಿಕರ ಮೊಗದಲ್ಲಿ ಸಂತೋಷ ತಂದಿದೆ. ಇದರಿಂದ ಅಂತರ್ಜಲಮಟ್ಟವು ಹೆಚ್ಚಳಗೊಂಡು, ಈ ಭಾಗದ ರೈತರಿಗೆ ಅನುಕೂಲವಾಗಲಿದೆ ಎಂದು ಆರ್.ನರೇಂದ್ರ ತಿಳಿಸಿದರು.
ಜಲಾಶಯ ನೋಡಲು ಪ್ರವಾಸಿಗರ ದಂಡು
ಮೈದುಂಬಿಕೊಂಡಿರುವ ಜಲಾಶಯದ ಸೌಂದರ್ಯ ಸವಿಯಲು ವೀಕೆಂಡ್ಗಳಲ್ಲಿ ಪ್ರವಾಸಿಗರು ತಂಡೋಪತಂಡವಾಗಿ ಬರುತ್ತಿದ್ದಾರೆ. ಕುಟುಂಬ, ಸ್ನೇಹಿತರು, ಮಕ್ಕಳೊಂದಿಗೆ ಆಗಮಿಸಿ ಜಲಾಶಯದ ಸೊಬಗನ್ನು ವೀಕ್ಷಣೆ ಮಾಡುತ್ತಿದ್ದಾರೆ.