ಕರ್ನಾಟಕ

karnataka

ETV Bharat / state

ಚಾಮರಾಜನಗರಕ್ಕೆ ಸುಧಾರಿತ ಡ್ರೋನ್ ಎಂಟ್ರಿ.... ಪುಂಡರಿಗೆ ಶಾಕ್​ - ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ್

ಈ ಹಿಂದೆ ಸಾಧಾರಣ ಡ್ರೋಣ್ ಮೂಲಕ ಪುಂಡರ ಮೇಲೆ ಕಣ್ಗಾವಲಿರಿಸಿ ಎದ್ದೆನೋ ಬಿದ್ದನೋ ಎಂದು ಪೇರಿ ಕೀಳುವಂತೆ ಮಾಡಿದ್ದ ಪೊಲೀಸರು ಈ ಬಾರಿ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಅನಗತ್ಯವಾಗಿ ಹರಟೆ ಹೊಡೆಯುವವರಿಗೆ, ಸಾಮಾಜಿಕ ಅಂತರ ಮರೆತವರಿಗೆ ಅರಿವು ಮೂಡಿಸಲು ರೆಡಿಯಾಗಿದ್ದಾರೆ.

advanced-drone-entry-to-chamarajanagar
ಚಾಮರಾಜನಗರಕ್ಕೆ ಸುಧಾರಿತ ಡ್ರೋನ್ ಎಂಟ್ರಿ

By

Published : Apr 30, 2020, 4:30 PM IST

ಚಾಮರಾಜನಗರ: ಸೈಲೆಂಟಾಗಿ ಬಂದು ಪುಂಡರನ್ನು ಹೆದರಿಸಿ ಓಡಿಸುತ್ತಿದ್ದ ಡ್ರೋಣಾಚಾರ್ಯ ಇನ್ಮುಂದೆ ಸದ್ದು ಮಾಡ್ಕೊಂಡೇ ಬಂದು ಎಲ್ಲರಿಗೂ ಶಾಕ್ ಕೊಡೊದಂತೂ ಖಾತ್ರಿಯಾಗಿದೆ.

ಹೌದು, ಇಂದಿನಿಂದ ಸುಧಾರಿತ ಡ್ರೋಣ್ ಬಳಸಲು ಚಾಮರಾಜನಗರ ಪೊಲೀಸರು ಮುಂದಾಗಿದ್ದು, ಪೊಲೀಸ್ ಸೈರನ್ ಜೊತೆಗೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ್ ಅವರ ಎಚ್ಚರಿಕೆಯ ಮಾತುಗಳು ಡ್ರೋಣ್ ನಲ್ಲಿ ಪಸರಿಸುವ ಪ್ಲಾನ್ ಇಂದಿನಿಂದ ಜಾರಿಯಾಗಿದೆ.

ಚಾಮರಾಜನಗರಕ್ಕೆ ಸುಧಾರಿತ ಡ್ರೋನ್ ಎಂಟ್ರಿ.
ಈ ಹಿಂದೆ ಸಾಧಾರಣ ಡ್ರೋಣ್ ಮೂಲಕ ಪುಂಡರ ಮೇಲೆ ಕಣ್ಗಾವಲಿರಿಸಿ ಎದ್ದೆನೋ ಬಿದ್ದನೋ ಎಂದು ಪೇರಿ ಕೀಳುವಂತೆ ಮಾಡಿದ್ದ ಪೊಲೀಸರು ಈ ಬಾರಿ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಅನಗತ್ಯವಾಗಿ ಹರಟೆ ಹೊಡೆಯುವವರಿಗೆ, ಸಾಮಾಜಿಕ ಅಂತರ ಮರೆತವರಿಗೆ ಅರಿವನ್ನು ಮೂಡಿಸಲು ರೆಡಿಯಾಗಿದ್ದಾರೆ. ಲಾಕ್​ಡೌನ್​ ಸಡಿಲವಾಗುತ್ತಿದ್ದಂತೆ ಜನರು ಬೀದಿಗಿಳಿದು ಸಾಮಾಜಿಕ ಅಂತರ ಮರೆತಿದ್ದು,ಸುಧಾರಿತ ಡ್ರೋಣ್ ಮೂಲಕ ಅರಿವು ಮೂಡಿಸಲು ಹೊರಟಿರುವ ಕ್ರಮ ಧನಾತ್ಮಕ ನಿರೀಕ್ಷೆ ಹುಟ್ಟಿಸಿದೆ.

ABOUT THE AUTHOR

...view details