ಚಾಮರಾಜನಗರ:ಕಳೆದ ಐದು ವರ್ಷದಿಂದ ಅಭಿಮಾನಿಯೊಬ್ಬ ಆತ ಮಾಡುವ ಟೀ ರುಚಿಯನ್ನು ನೆಚ್ಚಿನ ನಟನಿಗೆ ತೋರಿಸಬೇಕು ಎಂಬ ಆಸೆ ಕೊನೆಗೂ ಈಡೇರಿದ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇಂದು ಅವರ ಅಪ್ಪಟ್ಟ ಅಭಿಮಾನಿಯಾದ ಮಂಜು ಅವರ ಟೀ ಅಂಗಡಿಗೆ ಬಂದು ಚಹಾ ಕುಡಿದರು.
ಅಭಿಮಾನಿಯ ಟೀ ಅಂಗಡಿಯಲ್ಲಿ ಚಹಾ ಕುಡಿದ ಶಿವಣ್ಣ: 5 ವರ್ಷದ ಕನಸು - ನನಸು - 5 years dream of Shivarajm kumar fan was fulfilled
ಅಭಿಮಾನಿಯೊಬ್ಬರ ಟೀ ಅಂಗಡಿಗೆ ಇಂದು ನಟ ಶಿವರಾಜ್ ಕುಮಾರ್ ಭೇಟಿ ನೀಡಿದ್ದು, ಅಲ್ಲೇ ಚಹಾ ಕುಡಿದರು. ಈ ಮೂಲಕ ಅಭಿಮಾನಿಯ ಐದು ವರ್ಷದ ಕನಸು ಈಡೇರಿದಂತೆ ಆಗಿದೆ.
ಅಭಿಮಾನಿಯ ಐದು ವರ್ಷದ ಕನಸನ್ನು ನನಸು ಮಾಡಿದ ಶಿವಣ್ಣ
ಟೀ ಅಂಗಡಿ ಇಟ್ಟುಕೊಂಡಿರುವ ಮಂಜು ಕಳೆದ ಒಂದೂವರೆ ದಶಕದಿಂದ ಶಿವರಾಜ್ ಕುಮಾರ್ ಅಪ್ಪಟ ಅಭಿಮಾನಿಯಾಗಿದ್ದಾರೆ. 2016ರಿಂದಲೂ ತಮ್ಮ ಟೀ ಅಂಗಡಿಗೆ ಶಿವಣ್ಣನನ್ನು ಆಹ್ವಾನಿಸುತ್ತಿದ್ದರು. ಇನ್ನು ಶಿವಣ್ಣನನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದು, ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.
ಇದನ್ನೂ ಓದಿ: ಜುಲೈ 15ರಂದು ರಾಜ್ಯಾದ್ಯಂತ 'ಬೆಂಕಿ' ಬಿಡುಗಡೆ