ಕರ್ನಾಟಕ

karnataka

ETV Bharat / state

ಚಾಮರಾಜನಗರ ನಂದು ಎಂದು ಗುಟುರು ಹಾಕಿದ ಟಗರು.. ಶಿವಣ್ಣ-ಡಾಲಿಗೆ ಭರ್ಜರಿ ಸ್ವಾಗತ - ಚಾಮರಾಜನಗರದಲ್ಲಿ ಡಾಲಿ ಧನಂಜಯ್​

ಚಾಮರಾಜನಗರಕ್ಕೆ ಆಗಮಿಸಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಡಾಲಿ ಧನಂಜಯ್​ ಅವರಿಗೆ ಅಭಿಮಾನಿಗಳು ಭರ್ಜರಿ ಸ್ವಾಗತ ಕೋರಿದರು.

actor-shivarajkumar-dali-dhananjay-visits-chamarajanagar
ಚಾಮರಾಜನಗರಕ್ಕೆ ಆಗಮಿಸಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್

By

Published : Jun 25, 2022, 4:12 PM IST

Updated : Jun 25, 2022, 5:55 PM IST

ಚಾಮರಾಜನಗರ: ಬೈರಾಗಿ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮ ಇಂದು ನಗರದ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸಂಜೆ ನಡೆಯಲಿರುವುರಿಂದ ತವರಿಗೆ ಆಗಮಿಸಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಡಾಲಿ ಧನಂಜಯ್​ ಅವರಿಗೆ ನಗರದಲ್ಲಿ ಅಭಿಮಾನಿಗಳು ಭರ್ಜರಿ ಸ್ವಾಗತ ಕೋರಿದರು.

ಸೇಬಿನ ಹಾರ ಹಾಕಿ, ಪುಷ್ಪವೃಷ್ಟಿ ಸುರಿಸಿದ ಅಭಿಮಾನಿಗಳು

ನಗರದ ಸಂತೇಮರಹಳ್ಳಿ ವೃತ್ತಕ್ಕೆ ಶಿವಣ್ಣ ಬರುತ್ತಿದ್ದಂತೆ ಕ್ರೇನ್ ಸಹಾಯದಿಂದ ಬೃಹತ್​ ಸೇಬಿನ ಹಾರ ಹಾಕಿ ಪುಷ್ಪವೃಷ್ಟಿ ಸುರಿಸಲಾಯಿತು. 'ಚಾಮರಾಜನಗರ ನಂದು, ಬರ್ಕಳಯ್ಯ' ಎಂದು ಜೋಗಿ ಚಿತ್ರದ ಡೈಲಾಗ್ ಹೇಳಿ ರಂಜಿಸಿದ ಶಿವಣ್ಣ ಎರಡು ನಿಮಿಷ ನೃತ್ಯ ಮಾಡಿದರು. ಸೈಲೆನ್ಸ್ ಸೈಲೆನ್ಸ್ ಎಂದು ಅಭಿಮಾನಿಗಳಿಗೆ ಗದರಿ, ಮಾತು ಕೇಳುವಂತೆ ಕೋರಿಕೊಂಡಿದ್ದು, ಅಭಿಮಾನಿ ಒಬ್ಬನಂತೆ ಮಿಮಿಕ್ರಿ ಮಾಡಿದರು. ಶಿವಣ್ಣಗೆ ಡಾಲಿ ಧನಂಜಯ್​​​ ಸಾಥ್ ಕೊಟ್ಟರು.

ಶಿವಣ್ಣ, ಧನಂಜಯ್​ ಅವರಿಗೆ ಭರ್ಜರಿ ಸ್ವಾಗತ

ಶಿವಣ್ಣನ ಹತ್ತಿರ ಹೋಗಲು ನೂರಾರು ಅಭಿಮಾನಿಗಳು ಮುಗಿಬಿದ್ದಿದ್ದರಿಂದ ಪೊಲೀಸರು ಲಾಠಿ ಬೀಸಿ ಬೆತ್ತದ ರುಚಿ ತೋರಿಸಿದರು. ಸುತ್ತಮುತ್ತಲಿನ ಮನೆಗಳು, ಮಳಿಗೆ ಮೇಲೆಲ್ಲ ಜನರು ಹತ್ತಿಕೊಂಡು ನೆಚ್ಚಿನ ನಟನನ್ನು ಕಣ್ತುಂಬಿಕೊಂಡಿದ್ದು ಕಂಡುಬಂತು.

ಇದನ್ನೂ ಓದಿ:ಸದ್ದಿಲ್ಲದೆ ಎಂಗೇಜ್​ ಆದ ತಿಥಿ ಸಿನಿಮಾದ ನಟಿ ಪೂಜಾ!

Last Updated : Jun 25, 2022, 5:55 PM IST

ABOUT THE AUTHOR

...view details