ಚಾಮರಾಜನಗರ:ನ್ಯಾಯಬೆಲೆ ಅಂಗಡಿ ಹಾಗೂ ಖರೀದಿದಾರರಿಂದ ಅನ್ನಭಾಗ್ಯ ಯೋಜನೆಯ 129 ಮೂಟೆ ಅಕ್ಕಿ ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅನ್ನಭಾಗ್ಯಕ್ಕೆ ಕನ್ನ: 129 ಮೂಟೆ ಅಕ್ಕಿ ಸಾಗಿಸುತ್ತಿದ್ದ ಆಸಾಮಿ ಅರೆಸ್ಟ್ - ETV Bharath
ಕೊಳ್ಳೇಗಾಲ ತಾಲೂಕಿನ ಕುಣಗಳ್ಳಿ ಗ್ರಾಮದಿಂದ ಟಿ.ನರಸೀಪುರಕ್ಕೆ 129 ಮೂಟೆ ಅಕ್ಕಿ ಸಾಗಿಸುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ಕೊಳ್ಳೇಗಾಲ ಪೊಲೀಸರು ದಾಳಿ ನಡೆಸಿ ಓರ್ವನನ್ನು ಬಂಧಿಸಿದ್ದಾರೆ.
ಆರೋಪಿ ಮತ್ತು ವಶಪಡಿಸಿಕೊಂಡ ಅಕ್ಕಿಯಿದ್ದ ವಾಹನ.
ಕೊಳ್ಳೇಗಾಲದ ನೂರ್ ಮೊಹಲ್ಲಾ ನಿವಾಸಿ ಮೊಹಬೂಬ್ ಪಾಶಾ ಬಂಧಿತ ಆರೋಪಿ. ಈ ಘಟನೆ ಕೊಳ್ಳೇಗಾಲದಲ್ಲಿ ನಡೆದಿದ್ದು, ವಾಹನದಲ್ಲಿ 5,778 ಕೆ.ಜಿ ಅಕ್ಕಿ ವಶಪಡಿಸಿಕೊಂಡಿರುವ ಪೊಲೀಸರು, ಪ್ರಕರಣ ದಾಖಲಿಸಿಕೊಂಡಿದ್ದಾರೆ.