ಕೊಳ್ಳೇಗಾಲ:ಪಟ್ಟಣದ ಚಿಕ್ಕಚೌಡೇಶ್ವರಿ ದೇವಸ್ಥಾನದ ಪಕ್ಕದಲ್ಲಿದ್ದ ಮನೆಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಮನೆಯಲ್ಲಿದ್ದ ವಸ್ತುಗಳೆಲ್ಲ ಸುಟ್ಟು ಭಸ್ಮವಾಗಿರುವ ಘಟನೆ ನಡೆದಿದೆ.
ವೃದ್ಧೆ ಸಂಜೀವಮ್ಮ ಹಾಗೂ ಬೇಬಿ, ಸಣ್ಣಮ್ಮ, ಶಾಂತಿ ಎಂಬುವರ ಎರಡು ಕುಟುಂಬಗಳು ಹಾನಿಗೊಳಗಾದ ಮನೆಯಲ್ಲಿ ವಾಸವಿದ್ದವು. ವೃದ್ಧೆ ಸಂಜೀವಮ್ಮ ಮನೆಯ ಮಾಲೀಕರಾಗಿದ್ದಾರೆ. ಬೇಬಿ ತನ್ನ ಕುಟುಂಬದ ಸದಸ್ಯರ ಜೊತೆ ಬಾಡಿಗೆಗೆ ನೆಲೆಸಿದ್ದರು. ಸಣ್ಣಮ್ಮ ಒಬ್ಬರೇ ಮಲಗಿದ್ದ ವೇಳೆ ಮನೆಗೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ.