ಚಾಮರಾಜನಗರ :ಬೈಕ್ ಹಾಗೂ ಕಾರಿನ ಮಧ್ಯೆ ಭೀಕರ ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಹಿರಿಕಾಟಿಗೇಟಿನಲ್ಲಿ ನಡೆದಿದೆ. ನಂಜನಗೂಡು ಮೂಲದ ಶಶಿಕುಮಾರ್ (35), ಮಗ ದರ್ಶನ್(06) ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶಶಿಕುಮಾರ್ ಪತ್ನಿ ಚೈತ್ರಾ ಹಾಗೂ ಗಗನ್ (05) ಎಂಬುವರು ತೀವ್ರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನಿಸಲಾಗಿದೆ.
ಕಾರು-ಬೈಕ್ ಡಿಕ್ಕಿ : ತಂದೆ-ಮಗ ಸಾವು, ತಾಯಿ-ಮಗನ ಸ್ಥಿತಿ ಗಂಭೀರ - ಚಾಮರಾಜನಗರದಲ್ಲಿ ಅಪಘಾತ
ಅಪಘಾತದಲ್ಲಿ ತಂದೆ, ಮಗ ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ತಾಲೂಕಿನಲ್ಲಿ ನಡೆದಿದೆ..
ಕಾರು-ಬೈಕ್ ಡಿಕ್ಕಿ
ಮೈಸೂರಿನಿಂದ ಗುಂಡ್ಲುಪೇಟೆಗೆ ಕಡೆ ತೆರಳುತ್ತಿದ್ದ ಕಾರು ತುರ್ತಾಗಿ ಇಂಧನ ತುಂಬಿಸಲು ಎಡಕ್ಕೆ ತಿರುಗಿದ್ದರಿಂದ ಈ ಅವಘಡ ಉಂಟಾಗಿದೆ ಎನ್ನಲಾಗ್ತಿದೆ. ಮರಣೋತ್ತರ ಪರೀಕ್ಷೆಗಾಗಿ ಶವಗಳನ್ನು ರವಾನಿಸಲಾಗಿದೆ. ಕಾರು ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ಬೇಗೂರು ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
(ಇದನ್ನೂ ಓದಿ: ಕೊಂಡ ಹಾಯುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದ ಅರ್ಚಕ!)