ಚಾಮರಾಜನಗರ:ಕೇರಳದ ಪ್ರವಾಸಿಗರ ಕಾರೊಂದು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಗಂಡ-ಹೆಂಡತಿ ಇಬ್ಬರೂ ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಗರಗನಹಳ್ಳಿ ಗೇಟ್ ಬಳಿ ನಡೆದಿದೆ.
ಗುಂಡ್ಲುಪೇಟೆಯಲ್ಲಿ ಬೈಕ್ಗೆ ಕಾರು ಡಿಕ್ಕಿ: ಪತಿ-ಪತ್ನಿ ಸಾವು - Accident between Bike and car in Garaganahalli gate
ಸ್ವಗ್ರಾಮದಿಂದ ಬೈಕ್ನಲ್ಲಿ ಗುಂಡ್ಲುಪೇಟೆಗೆ ತೆರಳುತ್ತಿದ್ದ ವೇಳೆ ಪ್ರವಾಸಿ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಗಂಡ-ಹೆಂಡತಿ ಇಬ್ಬರೂ ಸಾವಿಗೀಡಾಗಿದ್ದಾರೆ.
![ಗುಂಡ್ಲುಪೇಟೆಯಲ್ಲಿ ಬೈಕ್ಗೆ ಕಾರು ಡಿಕ್ಕಿ: ಪತಿ-ಪತ್ನಿ ಸಾವು](https://etvbharatimages.akamaized.net/etvbharat/prod-images/768-512-4745150-thumbnail-3x2-vicky.jpg)
Accident place
ಗುಂಡ್ಲುಪೇಟೆ ತಾಲೂಕಿನ ರಾಘವಪುರ ಗ್ರಾಮದ ಪಾಪಣ್ಣ(55) ಹಾಗೂ ಪತ್ನಿ ಪುಟ್ಟಸಿದ್ದಮ್ಮ ಮೃತ ದುರ್ದೈವಿಗಳು. ಗ್ರಾಮದಿಂದ ಗುಂಡ್ಲುಪೇಟೆಗೆ ತೆರಳುವಾಗ ಎದುರಿನಿಂದ ಬಂದ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದ್ದು, ಸ್ಥಳದಲ್ಲೇ ಪಾಪಣ್ಣ ಮೃತಪಟ್ಟಿದ್ದಾರೆ ಹಾಗೂ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯದಲ್ಲಿ ಪತ್ನಿ ಪುಟ್ಟಸಿದ್ದಮ್ಮ ಅಸುನೀಗಿದ್ದಾರೆ.
ಘಟನೆ ನಡೆಯುತ್ತಿದ್ದಂತೆ ಚಾಲಕ ಪರಾರಿಯಾಗಿದ್ದು, ಬೇಗೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.