ಕರ್ನಾಟಕ

karnataka

ETV Bharat / state

ಗುತ್ತಿಗೆದಾರನಿಂದ 1 ಲಕ್ಷ ಲಂಚ ಪಡೆಯುತ್ತಿದ್ದ ಇಬ್ಬರು ಎಂಜಿನಿಯರ್ಸ್​ ಎಸಿಬಿ ಬಲೆಗೆ - ಲಂಚ ಪಡೆಯುತ್ತಿದ್ದ ಇಬ್ಬರು ಎಂಜಿನಿಯರ್ಸ್​ ಬಂಧಿಸಿದ ಎಸಿಬಿ

ಚಾಮರಾಜನಗರದ ಇಬ್ಬರು ಎಂಜಿನಿಯರ್​ಗಳು ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

acb-trapped-two-engineers-while-getting-bribe
ಲಂಚ ಪಡೆಯುತ್ತಿದ್ದ ಇಬ್ಬರು ಎಂಜಿನಿಯರ್ಸ್​ ಎಸಿಬಿ ಬಲೆಗೆ

By

Published : Mar 5, 2022, 10:02 PM IST

ಚಾಮರಾಜನಗರ: ಸಿವಿಲ್ ಗುತ್ತಿಗೆದಾರನಿಂದ ಒಂದು ಲಕ್ಷ ರೂ. ಲಂಚ ಪಡೆಯುವಾಗ ಚಾಮರಾಜನಗರದ ಇಬ್ಬರು ಎಂಜಿನಿಯರ್​ಗಳು ಎಸಿಬಿ ಬಲೆಗೆ ಬಿದ್ದಿರುವ ಘಟನೆ ಮೈಸೂರಿನ ಸಿದ್ಧಾರ್ಥ ಲೇಔಟ್​​ನಲ್ಲಿ ನಡೆದಿದೆ.

ಚಾಮರಾಜನಗರ ಎಇ ರಾಜಶೇಖರ್ ಹಾಗೂ ಎಇಇ ಶ್ಯಾಮಸುಂದರ್ ಎಸಿಬಿ ಬಲೆಗೆ ಬಿದ್ದ ಅಧಿಕಾರಿಗಳು. ದೊಡ್ಡರಾಯಪೇಟೆ ಏರಿ ದುರಸ್ತಿ ಕಾಮಗಾರಿಯ 3.5 ಲಕ್ಷ ರೂ. ಬಿಲ್​ ಪಾಸ್ ಮಾಡಲು ಈ ಇಬ್ಬರು ಎಂಜಿನಿಯರ್​ಗಳು ಒಂದು ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು ಎನ್ನಲಾಗ್ತಿದೆ.

ಇದನ್ನೂ ಓದಿ:ಸರ್ಕಾರಿ ಪದವಿ ಕಾಲೇಜುಗಳಿಗೆ ಪ್ರಭಾರಿ ಪ್ರಾಂಶುಪಾಲರ ನೇಮಕ, ಉಪನ್ಯಾಸಕರ ವರ್ಗಾವಣೆಗೆ ಮತ್ತೆ ಚಾಲನೆ

ಅಧಿಕಾರಿಗಳ ಲಂಚದಾಹಕ್ಕೆ ಬೇಸತ್ತ ಗುತ್ತಿಗೆದಾರ ಎಸಿಬಿ ಪೊಲೀಸರಿಗೆ ದೂರು ಕೊಟ್ಟು ಇಬ್ಬರನ್ನೂ ಖೆಡ್ಡಾಕ್ಕೆ ಬೀಳಿಸಿದ್ದಾನೆ. ಸದ್ಯ, ಇಬ್ಬರು ಅಧಿಕಾರಿಗಳನ್ನು ಬಂಧಿಸಿರುವ ಅಧಿಕಾರಿಗಳು ಲಂಚದ ಹಣವನ್ನು ವಶಪಡಿಸಿಕೊಂಡು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.‌

For All Latest Updates

TAGGED:

ABOUT THE AUTHOR

...view details